ಪಾರ್ಸಿ ಮಹಿಳೆಯು ಬೇರೆ ಧರ್ಮದ ವ್ಯಕ್ತಿಯನ್ನು ವಿವಾಹವಾದರೆ, ಆಕೆ ಪಾರ್ಸಿ ಧಾರ್ಮಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ ಎಂಬ ಪಾರ್ಸಿ ಕಾನೂನನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ನವದೆಹಲಿ(ಅ.10): ವಿಶೇಷ ವಿವಾಹ ಕಾಯ್ದೆಯಡಿ ಅಂತರ್‌'ಧರ್ಮೀಯ ವಿವಾಹವಾದ ಮಹಿಳೆಯು, ತನ್ನ ಮೂಲ ಧರ್ಮದ ಅಸ್ಮಿತೆ ಕಳೆದುಕೊಂಡು, ಪತಿಯ ಧರ್ಮವನ್ನು ಸ್ವೀಕರಿಸಿದಂತಾಗುತ್ತದೆಯೇ? ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸುಪ್ರೀಂಕೋರ್ಟ್ ವಿಷಯವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ವಿಶೇಷ ಕಾಯ್ದೆಯಡಿ ವಿವಾಹವಾದ ಪಾರ್ಸಿ ಮಹಿಳೆಯ ಧಾರ್ಮಿಕ ಅಸ್ಮಿತೆ, ಆಕೆಯ ಹಿಂದೂ ಪತಿಯ ಧರ್ಮದೊಂದಿಗೆ ವಿಲೀನವಾಗುತ್ತದೆ ಎಂಬ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಯಾಗಿದೆ.

ಪಾರ್ಸಿ ಮಹಿಳೆಯು ಬೇರೆ ಧರ್ಮದ ವ್ಯಕ್ತಿಯನ್ನು ವಿವಾಹವಾದರೆ, ಆಕೆ ಪಾರ್ಸಿ ಧಾರ್ಮಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ ಎಂಬ ಪಾರ್ಸಿ ಕಾನೂನನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಪಾರ್ಸಿ ಕಾನೂನನ್ನೇ ಎತ್ತಿಹಿಡಿದಿತ್ತು. ವಿವಾಹ ಬಳಿಕವೂ ಪಾರ್ಸಿ ಮಹಿಳೆ ತಮ್ಮ ಧಾರ್ಮಿಕ ಸಂಪ್ರದಾಯ ಮುಂದುವರಿಸುತ್ತಾಳೆ. ತನ್ನದೇ ವ್ಯಕ್ತಿತ್ವ ಹೊಂದಿರುವ ಮಹಿಳೆಯ ಅಸ್ಮಿತೆ ವಿವಾಹದಿಂದ ಅಳಿಸಲಾಗುವುದಿಲ್ಲ ಎಂದು ವಕೀಲೆ ಇಂದಿರಾ ಜೈಸಿಂಗ್ ವಾದಿಸಿದ್ದರು.