ವಿದ್ಯಾರ್ಥಿಗಳು ಕಟ್ಟಿದ್ದ 10 ಲಕ್ಷ ರು. ಶುಲ್ಕ ವಾಪಸು ಕೊಡುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಹಗರಣದ ವಾಸನೆ ಕಂಡುಬಂದಿದ್ದರೂ ಪ್ರವೇಶಾತಿಗೆ ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿತು.

ನವದೆಹಲಿ(ನ.25): ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರೊಬ್ಬರು ಭಾಗಿಯಾಗಿದ್ದಾರೆ ಎನ್ನಲಾದ ಲಖನೌನ ಜಿಸಿಆರ್‌ಜಿ ಕಾಲೇಜು ವೈದ್ಯಕೀಯ ಸೀಟು ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಶುಕ್ರವಾರ ಮಹತ್ವದ ಆದೇಶ ಹೊರಡಿಸಿದ್ದು, ಎಲ್ಲ 150 ವಿದ್ಯಾರ್ಥಿಗಳ ಪ್ರವೇಶಾತಿಯನ್ನು ರದ್ದುಗೊಳಿಸಿದೆ.

ಅಲ್ಲದೆ, ವಿದ್ಯಾರ್ಥಿಗಳು ಕಟ್ಟಿದ್ದ 10 ಲಕ್ಷ ರು. ಶುಲ್ಕ ವಾಪಸು ಕೊಡುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಹಗರಣದ ವಾಸನೆ ಕಂಡುಬಂದಿದ್ದರೂ ಪ್ರವೇಶಾತಿಗೆ ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿತು.