ಸಿಜೆಐ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ| ಗೊಗೋಯ್ ವಿರುದ್ಧದ ಆರೋಪ ಷಡ್ಯಂತ್ರದ ಭಾಗವೇ?| ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ತನಿಖೆ| ನಿ.ನ್ಯಾ.ಎ ಪಟ್ನಾಯಕ್ ನೇತೃತ್ವದ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್| ತನಿಖೆಗೆ ಸಹಕರಿಸುವಂತೆ ಸಿಬಿಐ, ಐಬಿ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚನೆ|

ನವದೆಹಲಿ(ಏ.25): ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಷಡ್ಯಂತ್ರವೇ ಎಂಬ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ. 

Scroll to load tweet…

ನಿವೃತ್ತ ನ್ಯಾ.ಪಟ್ನಾಯಕ್ ನೇತೃತ್ವದ ಸಮಿತಿ ರಚಿಸಿರುವ ಸುಪ್ರೀಂ ಕೋರ್ಟ್, ತನಿಖೆಗೆ ಸಹಕರಿಸಬೇಕೆಂದು ಸಿಬಿಐ, ಐಬಿ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ. 

Scroll to load tweet…

ಇದೇ ವೇಳೆ ಸಿಜೆಐ ವಿರುದ್ಧದ ಆರೋಪ ಷಡ್ಯಂತ್ರ ಎಂದು ಪ್ರತ್ಯಾರೋಪ ಮಾಡಿರುವ ವಕೀಲ ಉತ್ಸವ್ ಬೈನ್ಸ್ ಗೆ ತಮ್ಮ ಬಳಿ ಇರುವ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ.