ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!
ಸುಪ್ರೀಂ ಕೋರ್ಟ್ ನಿಂದ ಮತ್ತೊಂದು ಮಹತ್ವದ ತೀರ್ಪು! ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ! ಮಹಿಳೆ ಅಬಲೆ ಅಲ್ಲ ಎಂದ ಸುಪ್ರೀಂ ಕೋರ್ಟ್! ಎಲ್ಲಾ ವಯಸ್ಸಿನ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಸುಪ್ರೀಂ ಅಸ್ತು! ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಣೆ ಅಸಮಾನತೆಯ ಸಂಕೇತ ಎಂದ ಸುಪ್ರೀಂ!
ನವದೆಹಲಿ(ಸೆ.28): ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
"
Supreme Court allows entry of women in Kerala’s #Sabarimala temple. pic.twitter.com/I0zVdn0In1
— ANI (@ANI) September 28, 2018
ಮಹಿಳೆಯರು ಅಬಲೆ ಅಲ್ಲ ಎಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ, ಶತಮಾನಗಳಿಂದ ಮಹಿಳೆ ಮೇಲೆ ಶೋಷಣೆ ನಡೆದಿದೆ ಎಂದು ಅಭಿಪ್ರಾಯಪಟ್ಟಿದೆ.
ಅಯ್ಯಪ್ಪ ಭಕ್ತರು ಪ್ರತ್ಯೇಕ ಧಾರ್ಮಿಕ ಪಂಗಡವಲ್ಲ. ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸುವುದು ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ. ಪ್ರವೇಶವನ್ನು ನಿಷೇಧಿಸುವುದು ಧಾರ್ಮಿಕ ವಿಶ್ವಾಸದ ಭಾಗವೂ ಅಲ್ಲ ಎಂದು ಮು.ನ್ಯಾ. ದೀಪಕ್ ಮಿಶ್ರಾ ಹೇಳಿದ್ದಾರೆ.
Right to worship is given to all devotees and there can be no discrimination on the basis of gender: Chief Justice of India Dipak Misra. SC has allowed entry of all women in Kerala's #Sabarimala temple pic.twitter.com/jGdRMlH1l6
— ANI (@ANI) September 28, 2018
ಮಹಿಳೆಯರ ಕುರಿತಾದ ಈ ಅಸಮಾನತೆ ಬದಲಾಗಬೇಕಿದ್ದು, ಸಮಾಜ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕು ಎಂದು ಪೀಠ ಹೇಳಿದೆ. ಈ ನಿಟ್ಟಿನಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶ ನಿರಾಕರಣೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
The practice of barring women in age group of 10-50 to go inside the temple is violative of constitutional principles: Chief Justice of India Dipak Misra. #SabarimalaVerdict pic.twitter.com/jhYEqnEhwv
— ANI (@ANI) September 28, 2018
ಇದೇ ವೇಳೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದ್ದು, ಶಾರೀರಿಕ ಬದಲಾವಣೆಗಳು ನಂಬಿಕೆ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ 10-50 ವರ್ಷದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಈ ಹಿಂದೆ ಇದ್ದ ನಿರ್ಬಂಧವನ್ನು ತೆಗೆದು ಹಾಕಿದೆ.
ಹೆಣ್ಣಿಗೆ ಹೆಣ್ಣುಕುಲಕ್ಕೆ ಸಿಕ್ಕ ಜಯ ಸಂವಿಧಾನದ ಬರೆ ಅಂಬೇಡ್ಕರ್ ಧನ್ಯವಾದ ಹೇಳ್ತೀನಿ ಈ ರೀತಿ ತಿರ್ಪು ಬರುತ್ತೆ ಅಂತ ಗೊತಿತ್ತು.. ಇದೊಂದು ಐತಿಹಾಸಿಕ ತೀರ್ಪು ನ್ಯಾಯಾಂಗದ ಮೇಲೆ ದೇವರ ಮೇಲೆ ನಂಬಿಕೆ ಇನ್ನೂ ಹೆಚ್ಚಿಸಿದೆ ಈಗಲೂ ವಿರೋಧ ಮಾಡ್ತಿದ್ದರಲ್ಲ ಅನ್ನೋ ಪ್ರಶ್ನೆಗೆ ದೇವರೆ ಕಾಪಡುತ್ತಾನೆ-ಜಯಮಾಲ
The bar on entry of women between age of 10 and 50 years is not an essential part of the religion-ಮು.ನ್ಯಾ. ದೀಪಕ್ ಮಿಶ್ರಾ