ಕೋಲ್ಕತ್ತಾದ 33 ವರ್ಷದ ಮಹಿಳೆಯೊಬ್ಬರು ತನ್ನ ಗರ್ಭದ ಶಿಶುವಿಗೆ ಜನ್ಮಜಾತ ಸಮಸ್ಯೆಗಳಿದ್ದು, ಮಗು ಜನಿಸಿದ ನಂತರ ಬದುಕುವ ಸಾಧ್ಯತೆ ಕಡಿಮೆಯಿರುವ ಕಾರಣದಿಂದ ತನಗೆ ಗರ್ಭಪಾತ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ವ್ಯದ್ಯರ ವರದಿಯೊಂದಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ  ದೀಪಕ್ ಮಿಶ್ರಾ ಹಾಗೂ ಎ.ಎಂ. ಕಾನ್'ವಿಲ್ಕರ್ ಇದ್ದ ದ್ವಿಸದಸ್ಯ ನ್ಯಾಯಪೀಠ ಆದೇಶ ನೀಡಿದೆ.

ನವದೆಹಲಿ(ಜು.03): ಗರ್ಭಿಣಿಗೆ 26 ತಿಂಗಳವರೆಗೂ ಜನ್ಮಜಾತ ಸಮಸ್ಯೆಗಳಿದ್ದರೆ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಆದೇಶದಿಂದ ಗರ್ಭಪಾತ ಕಾನೂನಿನಲ್ಲಿನ ತಿದ್ದುಪಡಿಯನ್ನು 20 ವಾರಗಳ ಮೀರಿ ಅವಕಾಶ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಲ್ಕತ್ತಾದ 33 ವರ್ಷದ ಮಹಿಳೆಯೊಬ್ಬರು ತನ್ನ ಗರ್ಭದ ಶಿಶುವಿಗೆ ಜನ್ಮಜಾತ ಸಮಸ್ಯೆಗಳಿದ್ದು, ಮಗು ಜನಿಸಿದ ನಂತರ ಬದುಕುವ ಸಾಧ್ಯತೆ ಕಡಿಮೆಯಿರುವ ಕಾರಣದಿಂದ ತನಗೆ ಗರ್ಭಪಾತ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ವ್ಯದ್ಯರ ವರದಿಯೊಂದಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ದೀಪಕ್ ಮಿಶ್ರಾ ಹಾಗೂ ಎ.ಎಂ. ಕಾನ್'ವಿಲ್ಕರ್ ಇದ್ದ ದ್ವಿಸದಸ್ಯ ನ್ಯಾಯಪೀಠ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ಈ ಮೊದಲು ಮಹಿಳೆಯ ಆರೋಗ್ಯದ ಬಗ್ಗೆ ವರದಿ ನೀಡುವಂತೆ ಸರ್ಕಾರಿ ವ್ಯದ್ಯರಿದ್ದ ಮಂಡಳಿ ರಚಿಸಲು ಸೂಚಿಸಿತ್ತು. ಈ ಮಂಡಳಿ ಸಂಪೂರ್ಣವಾಗಿ ಪರೀಕ್ಷಿಸಿ ಗರ್ಭಪಾತ ಮಾಡಬಹುದು ಎಂದು ವರದಿ ನೀಡಿತ್ತು. ವರದಿಯನ್ನು ಆಧರಿಸಿದ ದ್ವಿಸದಸ್ಯ ಪೀಠ ತಕ್ಷಣವೇ ಗರ್ಭಪಾತ ಮಾಡಿಕೊಳ್ಳಲು ಆದೇಶ ನೀಡಿದೆ.

ವೈದ್ಯಕೀಯ ಟರ್ಮಿನೇಷನ್ 1971ರ ಗರ್ಭೀಣಿಯರ ಕಾಯಿದೆ ಪ್ರಕಾರ ಗರ್ಭಿಣಿಯರು 20 ವಾರಗಳವರೆಗೂ ಗರ್ಭಪಾತ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ 20 ವಾರದ ನಂತರ ಗರ್ಭಿಣಿಯರಿಗೆ ಸಮಸ್ಯೆಯುಂಟಾದರೆ ಗರ್ಭಪಾತ ಮಾಡಿಕೊಳ್ಳಲು ಅವಕಾಶವಿರಲಿಲ್ಲ. ಹಲವು ಮಹಿಳೆಯರು ಈ ಕಾನೂನನ್ನು ಮಾರ್ಪಡಿಸಬೇಕೆಂದು ಸುಪ್ರೀಂ ಮೋರೆ ಹೋಗಿದ್ದರು. ತದ ನಂತರ ಸುಪ್ರೀಂ ಕೆಲವು ಪ್ರಕರಣಗಳಲ್ಲಿ 24 ವಾರಗಳ ಕಾಲದವರೆಗೆ ಅವಕಾಶ ನೀಡಿದರೆ, ಮತ್ತು ಕೆಲವನ್ನು ತಿರಸ್ಕರಿಸಿತ್ತು.