6 ಡಿಸೆಂಬರ್ 1992ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆಸಂಬಂಧಿಸಿದವರೆಲ್ಲರಿಗೆ ತಮ್ಮ ವಾದವನ್ನು ಬರಹ ರೂಪದಲ್ಲಿ ಏ.6ರ ಮುಂಚೆ ಸಲ್ಲಿಸುವಂತೆ ನ್ಯಾ. ಪಿ.ಸಿ.ಘೋಷ್  ಹಾಗೂ ನ್ಯಾ. ಆರ್.ಎಫ್. ನಾರಿಮನ್ ಅವರನ್ನೊಳಗೊಂಡ ಪೀಠವು. ಪ್ರಕರಣವನ್ನು ಏ.7ಕ್ಕೆ ಆಲಿಸುವುದಾಗಿ ಹೇಳಿದೆ.

ನವದೆಹಲಿ (ಮಾ.23): ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಬಾಬ್ರಿ ಮಸೀದಿ ಧ್ವಂಸ ಆರೋಪಿಗಳಿಗೆ ಲಿಖಿತ ರೂಪದಲ್ಲಿ ಹೇಳಿಕೆಗಳನ್ನು ಸಲ್ಲಿಸುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣಕ್ಕೆಸಂಬಂಧಿಸಿದವರೆಲ್ಲರಿಗೆ ತಮ್ಮ ವಾದವನ್ನು ಬರಹ ರೂಪದಲ್ಲಿ ಏ.6ರ ಮುಂಚೆ ಸಲ್ಲಿಸುವಂತೆ ನ್ಯಾ. ಪಿ.ಸಿ.ಘೋಷ್ ಹಾಗೂ ನ್ಯಾ. ಆರ್.ಎಫ್. ನಾರಿಮನ್ ಅವರನ್ನೊಳಗೊಂಡ ಪೀಠವು. ಪ್ರಕರಣವನ್ನು ಏ.7ಕ್ಕೆ ಆಲಿಸುವುದಾಗಿ ಹೇಳಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ, ಜೋಷಿ ಹಾಗೂ ಉಮಾ ಭಾರತಿ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಆರೋಪವನ್ನು ಕೈಬಿಡದಿರಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.

ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ ಎರಡು ಪ್ರಕರಣಗಳು ದಾಖಲಾಗಿದ್ದು, ಒಂದರಲ್ಲಿ ‘ಹೆಸರಿಸ್ಪಡದ’ ಕರಸೇವಕರ ವಿರುದ್ಧ ದೂರು ದಾಖಲಾಗಿದ್ದು, ಅದು ಲಕ್ನೋ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಇನ್ನೊಂದು ದೂರಿನಲ್ಲಿ ಅಡ್ವಾಣಿ, ಜೋಷಿ, ಉಮಾ ಭಾರತಿ ಸೇರಿದಂತೆ 13 ಮಂದಿ ವಿರುದ್ಧ ಬಾಬ್ರಿ ಮಸೀದಿ ಧ್ವಂಸದ ಷಡ್ಯಂತ್ರ ರಚಿಸಿದ್ದಾರೆಂದು ಆರೋಪಿಸಲಾಗಿತ್ತು. ಆ ಪ್ರಕರಣ ವಿಚಾರಣೆ ನಡೆಸುತ್ತಿರುವ ರಾಯ್ ಬರೇಲಿ ಕೋರ್ಟ್ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.

ಆದರೆ ಆರೋಪಗಳನ್ನು ಕೈಬಿಡುವ ವಿರುದ್ಧ ಅಹಮದ್ ಎಂಬವರು ಹಾಗೂ ಸಿಬಿಐಯು ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.