ಮಾಜಿ ಸಚಿವ ಕಪಿಲ್ ಸಿಬಲ್ ಅವರು ಅಜಂ ಖಾನ್‌ ಪರ ವಕಾಲತ್ತು ವಹಿಸಿದ್ದರು.

ನವದೆಹಲಿ(ಡಿ.15): ಉತ್ತರ ಪ್ರದೇಶದ ಬುಲಂದ್‌'ಶಹರ್‌'ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಬೇಷರತ್ ಕ್ಷಮೆ ಯಾಚಿಸಿದ್ದು, ಅದನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.

ಜು.29ರಂದು ನೋಯ್ಡಾ ಮೂಲದ ಕುಟುಂಬ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಡಿಗೇಡಿಗಳ ಗುಂಪು ಗನ್ ಪಾಯಿಂಟ್‌'ನಲ್ಲಿ ತಾಯಿ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿತ್ತು.

ಈ ಘಟನೆಯ ಕುರಿತಂತೆ ಪ್ರತಿಕ್ರಿಯಿಸಿದ್ದ ಸಚಿವ ಅಜಂ ಖಾನ್ ಇದೊಂದು ರಾಜಕೀಯ ಪ್ರೇರಿತ ಘಟನೆ ಎಂದು ಹೇಳಿದ್ದರು. ಆ.29ರಂದು ಸುಪ್ರೀಂಕೋರ್ಟ್ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿತ್ತು.

ಅದರಂತೆ ನ.17ರಂದು ಸುಪ್ರೀಂಕೋರ್ಟ್ ಬೇಷರತ್ತಾಗಿ ಕ್ಷಮೆ ಯಾಚಿಸಬೇಕೆಂದು ಅವರಿಗೆ ತಾಕೀತು ಮಾಡಿತ್ತು.

ಮಾಜಿ ಸಚಿವ ಕಪಿಲ್ ಸಿಬಲ್ ಅವರು ಅಜಂ ಖಾನ್‌ ಪರ ವಕಾಲತ್ತು ವಹಿಸಿದ್ದರು.