ಸಿಬಿಐನಿಂದ ಎಫ್'ಐಆರ್ ದಾಖಲಾಗುತ್ತಿದ್ದಂತೆಯೇ ರವಿರಾಜ್ ಅವರನ್ನು ಬ್ಯಾಂಕ್ ಅಮಾನತು ಮಾಡಿತ್ತು. ಅಮಾನತು ಪತ್ರ ತಮಗೆ ತಲುಪಿದ ಬಳಿಕ ರವಿರಾಜ್ ಅವರು ನೇಣಿಗೆ ಶರಣಾಗಿದ್ದಾರೆ.
ಬೆಂಗಳೂರು(ಡಿ. 28): ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್'ನ ಉದ್ಯೋಗಿ ರವಿರಾಜ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ವಿವೇಕನಗರದಲ್ಲಿರುವ ತಮ್ಮ ಮನೆಯಲ್ಲಿ ರವಿರಾಜ್ ನೇಣಿಗೆ ಶರಣಾಗಿದ್ದಾರೆ. ಅವೆನ್ಯೂ ರಸ್ತೆಯ ಬ್ರ್ಯಾಂಚ್'ನ ಎಸ್'ಬಿಎಂ ಬ್ಯಾಂಕ್'ನ ಕ್ಯಾಷಿಯರ್ ಆಗಿದ್ದ ರವಿರಾಜ್ ಅವರ ಹೆಸರು ಕಪ್ಪುಹಣ ದಂಧೆಯಲ್ಲಿ ಕೇಳಿಬಂದಿತ್ತು. ಈ ಸಂಬಂಧ ಅವರನ್ನ ಉದ್ಯೋಗದಿಂದ ಅಮಾನತುಗೊಳಿಸಲಾಗಿತ್ತು. ಇವರ ವಿರುದ್ಧ ಸಿಬಿಐ ಎಫ್'ಐಆರ್ ಕೂಡ ದಾಖಲು ಮಾಡಿದೆ. ಮಲ್ಬರಿ ಎಂಬುವವರಿಗೆ ರವಿರಾಜ್ ಅವರು 20 ಲಕ್ಷ ರೂ ಕಪ್ಪುಹಣವನ್ನು ಬಿಳಿ ಮಾಡಿಕೊಟ್ಟಿದ್ದರೆಂಬ ಆರೋಪ ಇದೆ. ಸಿಬಿಐನಿಂದ ಎಫ್'ಐಆರ್ ದಾಖಲಾಗುತ್ತಿದ್ದಂತೆಯೇ ಬ್ಯಾಂಕ್ ರವಿರಾಜ್ ಅವರನ್ನು ಅಮಾನತು ಮಾಡಿತ್ತು. ಅಮಾನತು ಪತ್ರ ತಮಗೆ ತಲುಪಿದ ಬಳಿಕ ರವಿರಾಜ್ ಅವರು ನೇಣಿಗೆ ಶರಣಾಗಿದ್ದಾರೆ.
