ಸರ್ಕಾರ ಹಾಗೂ ಸಾರ್ವಜನಿಕ ವಲಯದಿಂದ ಹೆಚ್ಚಾಗುತ್ತಿರುವ ಒತ್ತಡ ‘ಕನಿಷ್ಟ ಬ್ಯಾಲೆನ್ಸ್ ’ ಹೊಂದದಿದ್ದಲ್ಲಿ ದಂಡ ವಿಧಿಸುವ ನಿಯಮವನ್ನು ಸಡಿಲಿಸಲು ಚಿಂತನೆ
ಮುಂಬೈ: ಸರ್ಕಾರ ಹಾಗೂ ಸಾರ್ವಜನಿಕ ವಲಯದಿಂದ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್’ಬಿಐ) ಯು ‘ಕನಿಷ್ಟ ಬ್ಯಾಲೆನ್ಸ್ ’ ಹೊಂದದಿದ್ದಲ್ಲಿ ದಂಡ ವಿಧಿಸುವ ನಿಯಮವನ್ನು ಸಡಿಲಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸನ್ನು ಹೊಂದಿರದಿದ್ದರೆ ಅವರಿಗೆ ಎಸ್’ಬಿಐಯು ದಂಡ ವಿಧಿಸುತ್ತಿದೆ.
ನಗರ ಪ್ರದೇಶದ ಗ್ರಾಹಕರು ತಮ್ಮ ಖಾತೆಯಲ್ಲಿ ₹ 3000, ಅರೆ-ನಗರ ಪ್ರದೇಶದ ಬ್ಯಾಂಕುಗಳಲ್ಲಿ ₹2000 ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರು ₹1000 ಮಾಸಿಕ ಸರಾಸರಿ ಮೊತ್ತವನ್ನು ಹೊಂದಿರದಿದ್ದಲ್ಲಿ ಎಸ್’ಬಿಐಯು ದಂಡವನ್ನು ವಿಧಿಸಲಾರಂಭಿಸಿತ್ತು.
ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ₹1000 ಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ. ಎಸ್’ಬಿಐಯು ಮಾಸಿಕ ಸರಾಸರಿ ಬದಲು ತ್ರೈಮಾಸಿಕ ಸರಾಸರಿ ಆಧಾರದಲ್ಲಿ ದಂಡ ವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಬ್ಯಾಂಕ್ ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಕನಿಷ್ಟ ಮೊತ್ತ ಹೊಂದಿರದ ಖಾತೆಗಳಿಗೆ ದಂಡ ವಿಧಿಸುವ ಮೂಲಕ ಕಳೆದ ಏಪ್ರಿಲ್-ನವಂಬರ್ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್’ಗೆ ₹ 1772 ಕೋಟಿ ಆದಾಯ ಬಂದಿದೆಯೆಂದು ವರದಿಯಾಗಿತ್ತು.
