ಬ್ಯಾಂಕ್ ನಲ್ಲಿ ಕನಿಷ್ಟ ಬ್ಯಾಲೆನ್ಸ್ ನಿರ್ವಹಿಸದ ತನ್ನ ಖಾತೆದಾರರಿಗೆ ಎಸ್ ಬಿಐ ಇಂದಿನಿಂದ ದಂಡ ವಿಧಿಸಲಿದೆ.

ನವದೆಹಲಿ (ಏ.01): ಬ್ಯಾಂಕ್ ನಲ್ಲಿ ಕನಿಷ್ಟ ಬ್ಯಾಲೆನ್ಸ್ ನಿರ್ವಹಿಸದ ತನ್ನ ಖಾತೆದಾರರಿಗೆ ಎಸ್ ಬಿಐ ಇಂದಿನಿಂದ ದಂಡ ವಿಧಿಸಲಿದೆ.

ಮೆಟ್ರೋಪಾಲಿಟಾನ್ ನಗರಗಳಲ್ಲಿ ರೂ.5000, ನಗರ ಪ್ರದೇಶಗಳಲ್ಲಿ ರೂ.3000, ಅರೆ ನಗರ ಪ್ರದೇಶಗಳಲ್ಲಿ ರೂ. 2000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೂ. 1000 ರೂ ಕನಿಷ್ಠ ಬ್ಯಾಲೆನ್ಸನ್ನು ನಿರ್ವಹಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ತಿಂಗಳಿಗೆ 3 ಕ್ಕಿಂತ ಜಾಸ್ತಿ ನಗದು ವ್ಯವಹಾರ ಮಾಡುವ ಗ್ರಾಹಕರಿಗೆ ರೂ.50 ದಂಡ ವಿಧಿಸಲಿದೆ. ವಿದ್ಯಾರ್ಥಿಗಳು, ಪಿಂಚಣಿದಾರರು ಸೇರಿದಂತೆ 31 ಕೋಟಿ ಡಿಪಾಸಿಟರ್ ಮೇಲೆ ಪರಿಣಾಮ ಬೀರಲಿದೆ.

ಎಸ್ ಬಿಐ ಚೇರ್ ಮನ್ ಅರುಂಧತಿ ಭಟ್ಟಾಚಾರ್ಯ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಭಾರೀ ಪ್ರಮಾಣದಲ್ಲಿ ಖಾಲಿ ಬಿದ್ದಿರುವ ಜನ್ ಧನ್ ಖಾತೆಯನ್ನು ನಿರ್ವಹಿಸುವುದು ಹೊರೆಯಾಗುತ್ತಿದೆ. ಬೇರೆಲ್ಲ ಬ್ಯಾಂಕುಗಳಿಗೆ ಹೋಲಿಸಿದರೆ ಎಸ್ ಬಿಐ ನಿಗದಿಪಡಿಸಿರುವ ಮಿನಿಮಮ್ ಬ್ಯಾಲೆನ್ಸ್ ಮೊತ್ತ ಕಡಿಮೆಯಿದೆ. ನಾವು 11 ಕೋಟಿ ಖಾತೆಯನ್ನು ಹೊಂದಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ ಎಂದು ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.