Asianet Suvarna News Asianet Suvarna News

ಎಸ್’ಬಿಐನಿಂದ 20 ಸಾವಿರ ಕೋಟಿ ಸಾಲ ಮನ್ನಾ

ಕಳೆದ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಟ್ಟಾರೆ 81,683 ಕೋಟಿ ರೂ.ನಷ್ಟು ವಸೂಲಾಗದೇ ಇದ್ದ ಭಾರೀ ಪ್ರಮಾಣದ ಸಾಲವನ್ನು ಮನ್ನಾ ಮಾಡಿವೆ.

SBI Loan waived

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಟ್ಟಾರೆ 81,683 ಕೋಟಿ ರೂ.ನಷ್ಟು ವಸೂಲಾಗದೇ ಇದ್ದ ಭಾರೀ ಪ್ರಮಾಣದ ಸಾಲವನ್ನು ಮನ್ನಾ ಮಾಡಿವೆ. ಈ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅತಿ ಹೆಚ್ಚು ಅಂದರೆ 20,339 ಕೋಟಿ ರು. ಸಾಲವನ್ನು ಮನ್ನಾ ಮಾಡಿದೆ.

ಇದು ಎಸ್‌ಬಿಐನಲ್ಲಿ 5 ಸಹಯೋಗಿ ಬ್ಯಾಂಕ್‌ಗಳು ವಿಲೀನವಾಗುವುದಕ್ಕೂ ಮುನ್ನ ಮಾಡಲಾದ ಮನ್ನಾ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಹೇಳಿವೆ. 2012 -13ರಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು 27,231 ಕೋಟಿ ರು. ವಸೂಲಾಗದ ಸಾಲವನ್ನು ಮನ್ನಾ ಮಾಡಿದ್ದವು. 2013 -14ರಲ್ಲಿ ಇದರ ಪ್ರಮಾಣ 34,409 ಕೋಟಿ, 2014-15 ರಲ್ಲಿ 49,018 ಕೋಟಿ, 2015 -16 ರಲ್ಲಿ 57,585 ಕೋಟಿಗೆ ಏರಿತು.

Follow Us:
Download App:
  • android
  • ios