ಜತೆಗೆ ತನ್ನ ಶಾಖೆಯಲ್ಲಿ ನಗದು ವರ್ಗಾವಣೆಗೆ ಮಿತಿ ಹೇರಿದ್ದು, ಮೂರು ವರ್ಗಾವಣೆಯ ಬಳಿಕ ಪ್ರತಿ ವರ್ಗಾವಣೆಗೆ 50 ರೂ ಶುಲ್ಕ ವಿಧಿಸಿದೆ.

ಮುಂಬೈ(ಮಾ.19): ಎಸ್'ಬಿಐ ಉಳಿತಾಯ ಖಾತೆಯಲ್ಲಿ ತಿಂಗಳಿಗೆ ಕನಿಷ್ಠ ಠೇವಣಿ ಮೊತ್ತವಿಡದ ಗ್ರಾಹಕರು ಏಪ್ರಿಲ್‌ 1 ರಿಂದ ದಂಡ ಪಾವತಿಸಬೇಕಾಗುತ್ತದೆ.

ಮಹಾನಗರಗಳಲ್ಲಿ ಸೇವಾ ತೆರಿಗೆ ಹೊರತುಪಡಿಸಿ ಕನಿಷ್ಠ 20 ರೂ ದಂಡ ತೆರಬೇಕಾಗುತ್ತದೆ. ಐದು ವರ್ಷಗಳ ನಂತರ ದೇಶದ ಅತಿದೊಡ್ಡ ಸಾಲದಾತ ಸಂಸ್ಥೆ ಎಸ್‌ಬಿಐ ಗ್ರಾಹಕರಿಗೆ ದಂಡ ವಿಧಿಸುವ ನಿರ್ಧಾರ ಕೈಗೊಂಡಿದೆ. ಜತೆಗೆ ತನ್ನ ಶಾಖೆಯಲ್ಲಿ ನಗದು ವರ್ಗಾವಣೆಗೆ ಮಿತಿ ಹೇರಿದ್ದು, ಮೂರು ವರ್ಗಾವಣೆಯ ಬಳಿಕ ಪ್ರತಿ ವರ್ಗಾವಣೆಗೆ 50 ರೂ ಶುಲ್ಕ ವಿಧಿಸಿದೆ. ಬೇರೆ ಶಾಖೆಯಲ್ಲಿ ಒಂದು ದಿನಕ್ಕೆ ಗರಿಷ್ಠ 2 ಲಕ್ಷದವರೆಗೆ ನಗದು ಠೇವಣಿ ಇಡಬಹುದು. ಅದಕ್ಕೂ ಹೆಚ್ಚಿನ ಮೊತ್ತದ ನಗದು ಠೇವಣಿ ಸ್ವೀಕರಿಸುವ ಅಧಿಕಾರವನ್ನು ಆ ಶಾಖೆಯ ವ್ಯವಸ್ಥಾಪಕರಿಗೆ ನೀಡಲಾಗಿದೆ.