Asianet Suvarna News Asianet Suvarna News

ಕಪ್ಪು ಹಣ ತಡೆ ಯೋಜನೆ: ಹಣ ಸಂಗ್ರಹದಲ್ಲಿ ಎಸ್'ಬಿಐಗೆ ಅಗ್ರ ಸ್ಥಾನ

ಕೇಂದ್ರ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟಲು ಮಾಡಿರುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು , ಒಟ್ಟಾರೆ 2ಲಕ್ಷ ಕೋಟಿ ಹಣ ಬ್ಯಾಂಕುಗಳಲ್ಲಿ ಜಮೆ ಆಗಿದೆ. ಕಪ್ಪು ಹಣದ ವಿರುದ್ಧ ಸಮರ ಸಾರಿರುವ  ಕೇಂದ್ರ ಸರ್ಕಾರ ಜನರ ಬಳಿಯಿರುವ ಹಳೆಯ 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ದೇಶದ ಜನರಿಗೆ ಸೂಚನೆ ನೀಡಿದೆ. ಜನರು ಕಳೆದ 5 ದಿನಗಳಿಂದ ತಮ್ಮ ಬಳಿ ಇರುವ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ಬ್ಯಾಂಕ್​'ಗಳಲ್ಲಿ  ಡೆಪಾಸಿಟ್​ ಮಾಡುತ್ತಿದ್ದಾರೆ.   ಅಚ್ಚರಿ ಎಂದರೆ ನಿನ್ನೆ ಮಧ್ಯಾಹ್ನ 12.15ರ ವೇಳೆಗೆ  2 ಲಕ್ಷ ಕೋಟಿ ಹಣ ವಿವಿಧ ಬ್ಯಾಂಕ್​ ಗಳಲ್ಲಿ  ಜಮೆ ಆಗಿದೆ.

SBI Got Top Position In Collecting Money

ನವದೆಹಲಿ(ನ.13): ಕೇಂದ್ರ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟಲು ಮಾಡಿರುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು , ಒಟ್ಟಾರೆ 2ಲಕ್ಷ ಕೋಟಿ ಹಣ ಬ್ಯಾಂಕುಗಳಲ್ಲಿ ಜಮೆ ಆಗಿದೆ.

ವಿವಿಧ ಬ್ಯಾಂಕುಗಳಲ್ಲಿ  2 ಲಕ್ಷ ಕೋಟಿ ಹಣ ಜಮೆ

ಕಪ್ಪು ಹಣದ ವಿರುದ್ಧ ಸಮರ ಸಾರಿರುವ  ಕೇಂದ್ರ ಸರ್ಕಾರ ಜನರ ಬಳಿಯಿರುವ ಹಳೆಯ 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ದೇಶದ ಜನರಿಗೆ ಸೂಚನೆ ನೀಡಿದೆ. ಜನರು ಕಳೆದ 5 ದಿನಗಳಿಂದ ತಮ್ಮ ಬಳಿ ಇರುವ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ಬ್ಯಾಂಕ್​'ಗಳಲ್ಲಿ  ಡೆಪಾಸಿಟ್​ ಮಾಡುತ್ತಿದ್ದಾರೆ.   ಅಚ್ಚರಿ ಎಂದರೆ ನಿನ್ನೆ ಮಧ್ಯಾಹ್ನ 12.15ರ ವೇಳೆಗೆ  2 ಲಕ್ಷ ಕೋಟಿ ಹಣ ವಿವಿಧ ಬ್ಯಾಂಕ್​ ಗಳಲ್ಲಿ  ಜಮೆ ಆಗಿದೆ.

ಹಣ ಸಂಗ್ರಹದಲ್ಲಿ ಎಸ್​ಬಿಐಗೆ ಅಗ್ರ ಸ್ಥಾನ 

ಗ್ರಾಹಕರು  ಹೆಚ್ಚಾಗಿ  ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ  ಹಣ ತುಂಬಿದ್ದು , 47, 868 ಕೋಟಿ ಹಣವನ್ನು ಡೆಪಾಸಿಟ್​ ಮಾಡಿದ್ದಾರೆ ಎಂದು ವಿತ್ತ ಸಚಿವ ಅರುಣ್​ ಜೇಟ್ಲಿ ಹೇಳಿದ್ದಾರೆ.

ಜನ್​ ಧನ್​ ಅಕೌಂಟ್​ಗಳಲ್ಲೂ ಹಣದ ಹೊಳೆ!

ಇದಿಷ್ಟೇ ಅಲ್ಲದೆ ಪ್ರಧಾನಿ  ಮೋದಿಯವರ ಯೋಜನೆಗಳಲ್ಲೊಂದಾದ ಜನ್​ಧನ್​ ಯೋಜನೆಯಲ್ಲೂ ಜನರು ಹಣ ತುಂಬಿದ್ದು , ಅದರಲ್ಲೂ  ಹಣ ಏರಿಕೆಯಾಗಿದೆ.  ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು. ಇದೀಗ ಜನರು ಹಣ ವಿನಿಮಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈ ಯೋಜನೆ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಒಟ್ಟಿನಲ್ಲಿ   ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದು ಇದಕ್ಕೆ  ದೇಶದ ನಾಗರೀಕರು ಉತ್ತಮವಾಗಿ  ಪ್ರತಿಕ್ರಿಯಿಸುತ್ತಿದ್ದಾರೆ.

 

Follow Us:
Download App:
  • android
  • ios