ಎಸ್'ಬಿಐ'ನಿಂದ ಸ್ವಚ್ಛ ಭಾರತ ಅಭಿಯಾನ

First Published 24, Jan 2018, 10:21 PM IST
SBI employees participate in Swachh Bharat Abhiyan
Highlights

ಎಸ್​.ಎನ್​. ರಮಾಕಾಂತ್​, ಶೋಭಾ ರಾಘವನ್​​​ ಮೊದಲಾದ ತಜ್ಞರ ನೇತೃತ್ವದಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಬ್ಯಾಂಕ್​​​ನ ಸಿಬ್ಬಂದಿಗಳೊಂದಿಗೆ ಸೆಮಿನಾರ್​​ ನಡೆಸಲಾಯಿತು.

ಕೇಂದ್ರ ಸರ್ಕಾರದ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಸ್ಟೇಟ್​​ ಬ್ಯಾಂಕ್​​ ಆಫ್​ ಇಂಡಿಯಾ ಅಭಿಯಾನ ಪ್ರಾರಂಭಿಸಿದೆ. ಜನವರಿ 16ರಿಂದ ಜನವರಿ 30ರವರೆಗೆ 15 ದಿನಗಳ ಕಾಲ ಎಸ್​ಬಿಐ ಸ್ವಚ್ಛತಾ ಅಭಿಯಾನ ಕೈಗೊಂಡಿದೆ.

ಎಸ್​.ಎನ್​. ರಮಾಕಾಂತ್​, ಶೋಭಾ ರಾಘವನ್​​​ ಮೊದಲಾದ ತಜ್ಞರ ನೇತೃತ್ವದಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಬ್ಯಾಂಕ್​​​ನ ಸಿಬ್ಬಂದಿಗಳೊಂದಿಗೆ ಸೆಮಿನಾರ್​​ ನಡೆಸಲಾಯಿತು. ಇದಕ್ಕೆ ಪೂರಕವಾಗಿ ಇಂದು ಬೆಳಗ್ಗೆ ಎಸ್​ಬಿಐನ ಉದ್ಯೋಗಿಗಳು ಕಬ್ಬನ್​ಪಾರ್ಕ್​​ನಲ್ಲಿ ಕಸ ಗುಡಿಸಿ, ನೆಲದಲ್ಲಿ ಬಿದ್ದಿರುವ ಪ್ಲಾಸ್ಟಿಕ್​​ ತ್ಯಾಜ್ಯವನ್ನು ಸಂಗ್ರಹಿಸಿ  ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು ವಿಶೇಷವಾಗಿತ್ತು.

loader