ಬಿಜೆಪಿಯ ಪರಿವರ್ತನಾ ರಾಲಿ ಹಿನ್ನೆಲೆಯಲ್ಲಿ ಶುಕ್ರವಾರ ಹೆಬ್ಬೂರಿನಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಅಚಾತುರ್ಯ ಮಾಡಿದ್ದಾರೆ

ತುಮಕೂರು(ನ.04): ಸವಿತಾ ಸಮಾಜದವರನ್ನು ‘ಹಜಾಮರು’ ಎನ್ನುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿವಾದಕ್ಕೆ ಸಿಲುಕಿದ್ದಾರೆ.

‘ಹಜಾಮರು’ ಪದ ಬಳಸದಂತೆ ಸರ್ಕಾರದಿಂದಲೇ ಆದೇಶವಿದೆ. ಆದರೆ, ಬಿಜೆಪಿಯ ಪರಿವರ್ತನಾ ರಾಲಿ ಹಿನ್ನೆಲೆಯಲ್ಲಿ ಶುಕ್ರವಾರ ಹೆಬ್ಬೂರಿನಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಅಚಾತುರ್ಯ ಮಾಡಿದ್ದಾರೆ. ‘ನಾನು ಇಂಧನ ಸಚಿವನಾಗಿದ್ದಾಗ ಗುಜರಾತಿಗೆ ಹೋಗಿದ್ದೆ. ಅಲ್ಲಿನ ಪ್ರತಿ ಗ್ರಾಮದ ಮೂಲೆ ಮೂಲೆಯಲ್ಲೂ ವಿದ್ಯುತ್ ಇತ್ತು. ಒಂದು ಹಳ್ಳಿಯ ‘ಹಜಾಮರ’ ಶಾಪ್‌ಗೆ ಹೋಗಿದ್ವಿ. ಅಲ್ಲೂ ನಿರಂತರ ವಿದ್ಯುತ್ ಸಂಪರ್ಕವಿತ್ತು’ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸವಿತಾ ಸಮಾಜದ ಮುಖಂಡರು ಆಕ್ಷೇಪಿಸಿದ್ದಾರೆ.