ಹಜ್ ಪ್ರವಾಸಿಗರಿಗೆ ಕಡಿಮೆ ವೆಚ್ಚದ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಕೇಂದ್ರ ಸರ್ಕಾರ ಕೋರಿದ್ದಂತೆ, ಜೆಡ್ಡಾಕ್ಕೆ ಸಮುದ್ರ ಮಾರ್ಗದಲ್ಲಿ ಪ್ರಯಾಣದ ಪ್ರಸ್ತಾಪಕ್ಕೆ ಸೌದಿ ಅರೇಬಿಯಾ ಒಪ್ಪಿಗೆ ನೀಡಿದೆ

ನವದೆಹಲಿ(ಜ.09): ಹಜ್ ಪ್ರವಾಸಿಗರಿಗೆ ಕಡಿಮೆ ವೆಚ್ಚದ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಕೇಂದ್ರ ಸರ್ಕಾರ ಕೋರಿದ್ದಂತೆ, ಜೆಡ್ಡಾಕ್ಕೆ ಸಮುದ್ರ ಮಾರ್ಗದಲ್ಲಿ ಪ್ರಯಾಣದ ಪ್ರಸ್ತಾಪಕ್ಕೆ ಸೌದಿ ಅರೇಬಿಯಾ ಒಪ್ಪಿಗೆ ನೀಡಿದೆ. ಹಜ್ ಯಾತ್ರೆಗೆ 23 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಸಮುದ್ರ ಮಾರ್ಗದಲ್ಲಿ ಪ್ರಯಾಣಿಸಬಹುದಾದ ಸಂಪ್ರದಾಯಕ್ಕೆ ಮತ್ತೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಕ್ಕಾದಲ್ಲಿ ಭಾನುವಾರ ಈ ಕುರಿತ ದ್ವೈವಾರ್ಷಿಕ ಒಪ್ಪಂದಕ್ಕೆ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಸೌದಿ ಹಜ್ ಸಚಿವ ತಾಹಿರ್ ಬೆಂಟೆನ್ ಸಹಿ ಮಾಡಿದ್ದಾರೆ.