ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸೇರಿದಂತೆ 5 ದೇಶಗಳ ನಾಗರಿಕರಿಗೆ ಸೌದಿ ಅರೇಬಿಯಾ ವೀಸಾ ನೀಡುವುದಿಲ್ಲ ಎಂದು ಪ್ರಕಟಿಸಿತ್ತು.

ರಿಯಾದ್(ಫೆ.07): ವೀಸಾ ನಿಯಮ ಉಲ್ಲಂಘಿಸಿ ಅರೇಬಿಯಾದಲ್ಲೇ ನೆಲೆಸಿದ್ದ 39 ಸಾವಿರ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿರುವ ಅಧಿಕಾರಿಗಳು ಅವರನ್ನು ಅವರ ಸ್ವದೇಶಕ್ಕೆ ವಾಪಸ್ ಕಳುಹಿಸಿದ್ದಾರೆ. ಅಲ್ಲದೆ, ಪಾಕ್‌'ನ ಕೆಲವರು ಉಗ್ರ ಐಎಸ್ ಸಂಘಟನೆ ಬಗ್ಗೆ ಸಹಾನೂಭೂತಿ ಹೊಂದಿರುವ ಸಾಧ್ಯತೆಯಿದ್ದು, ಅವರ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುವಂತೆ ಉನ್ನತ ಭದ್ರತಾ ಅಧಿಕಾರಿಗಳು ಆದೇಶಿಸಿದ್ದಾರೆ.

ಸಾರ್ವಜನಿಕರಿಗೆ ಮತ್ತು ಸಮಾಜಕ್ಕೆ ಭೀತಿಯೊಡ್ಡುವ ಐಎಸ್‌'ನ ಉಗ್ರ ಕೃತ್ಯಗಳಲ್ಲಿ ಪಾಕಿಸ್ತಾನದ ಬಹುತೇಕ ಪ್ರಜೆಗಳು ಭಾಗಿಯಾಗಿದ್ದಾರೆ. ಅಲ್ಲದೆ, ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ, ಕಳ್ಳತನ, ಹಲ್ಲೆಯಂತಹ ಪ್ರಕರಣಗಳಲ್ಲೂ ಪಾಕಿಸ್ತಾನಿಗಳು ಪಾಲುದಾರರು ಎಂದು ಅರೇಬಿಯಾ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸೇರಿದಂತೆ 5 ದೇಶಗಳ ನಾಗರಿಕರಿಗೆ ಸೌದಿ ಅರೇಬಿಯಾ ವೀಸಾ ನೀಡುವುದಿಲ್ಲ ಎಂದು ಪ್ರಕಟಿಸಿತ್ತು.