ಸೌದಿ ದೊರೆ ಮಹಮ್ಮದ್ ಬಿನ್ ಸಲ್ಮಾನ್ ಸಚಿವ ಸಂಪುಟವನ್ನು ಪುನರ್ ರಚಿಸಿದ್ದು, ರಾಜ ಕುಟುಂಬದ ಅತ್ಯಂತ ಪ್ರಭಾವಿ ಸದಸ್ಯರನ್ನು ದೇಶದ ರಕ್ಷಣೆ ಮತ್ತು ಆರ್ಥಿಕ ಹುದ್ದೆಗಳಿಂದ ವಜಾಗೊಳಿಸಿ ಅವರ ಸ್ಥಾನಕ್ಕೆ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ. ಜೊತೆಗೆ ರಾಜಾಜ್ಞೆ ಹೊರಡಿಸಿ ನೂತನ ಭ್ರಷ್ಟಾಚಾರ ನಿಗ್ರಹ ಆಯೋಗವನ್ನು ರಚಿಸಿದ್ದಾರೆ.

ರಿಯಾದ್(ನ.06): ಸೌದಿ ಅರೇಬಿಯಾದ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿರುವ ದೊರೆ ಮೊಹಮ್ಮದ್ ಬಿನ್ ಸಲ್ಮಾನ್, ತಮ್ಮದೇ ರಾಜಮನೆತನದ ವಿರುದ್ಧವೇ ಸಮರ ಸಾರಿದ್ದಾರೆ. ಭ್ರಷ್ಟಾಚಾರದ ಆರೋಪದ

ಮೇಲೆ 11 ಯುವರಾಜರು, ಹಲವು ಹಾಲಿ ಮತ್ತು ಮಾಜಿ ಮಂತ್ರಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಈ ಪೈಕಿ 1.2 ಲಕ್ಷ ಕೋಟಿ ರು. ಸಂಪತ್ತಿನ ಒಡೆಯರಾಗಿರುವ ಕಿಂಗ್ ಡಮ್ ಹೋಲ್ಡಿಂಗ್ ಕಂಪನಿಯ ಮಾಲೀಕ, ವಿಶ್ವದ

45ನೇ ಅತಿ ಶ್ರೀಮಂತ ವ್ಯಕ್ತಿ ಅಲ್ ವಲೀದ್ ಬಿನ್ ತಲಾಲ್ ಕೂಡಾ ಸೇರಿದ್ದಾರೆ.

ದೇಶದ ಆಡಳಿತವನ್ನು ಭ್ರಷ್ಟಾಚಾರ ಮುಕ್ತ, ಪಾರದರ್ಶಕವಾಗಿರಿಸುವ ನಿಟ್ಟಿನಲ್ಲಿ ದೊರೆ ಸಲ್ಮಾನ್ ಕೈಗೊಂಡಿರುವ ಈ ಐತಿಹಾಸಿಕ ಕ್ರಮಗಳು ದೇಶದ ರಾಜಮನೆತನ ಮತ್ತು ಉದ್ಯಮ ವಲಯದಲ್ಲಿ ಭಾರೀ ಆಘಾತ ಮೂಡಿಸಿದೆ. ಈ ಆದೇಶದ ಬೆನ್ನಲ್ಲೇ ಸೌದಿ ದೊರೆ ಮಹಮ್ಮದ್ ಬಿನ್ ಸಲ್ಮಾನ್ ಸಚಿವ ಸಂಪುಟವನ್ನು ಪುನರ್ ರಚಿಸಿದ್ದು, ರಾಜ ಕುಟುಂಬದ ಅತ್ಯಂತ ಪ್ರಭಾವಿ ಸದಸ್ಯರನ್ನು ದೇಶದ ರಕ್ಷಣೆ ಮತ್ತು ಆರ್ಥಿಕ ಹುದ್ದೆಗಳಿಂದ ವಜಾಗೊಳಿಸಿ ಅವರ ಸ್ಥಾನಕ್ಕೆ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ. ಜೊತೆಗೆ ರಾಜಾಜ್ಞೆ ಹೊರಡಿಸಿ ನೂತನ ಭ್ರಷ್ಟಾಚಾರ ನಿಗ್ರಹ ಆಯೋಗವನ್ನು ರಚಿಸಿದ್ದಾರೆ.

ಭ್ರಷ್ಟಾಚಾರ ಆರೋಪ ಸಂಬಂಧ 11 ಯುವರಾಜರನ್ನು ಈಗಾಗಲೇ ಬಂಧಿಸಲಾಗಿದೆ. ನಾಲ್ವರು ಹಾಲಿ ಸಚಿವರು ಮತ್ತು 10ಕ್ಕೂ ಹೆಚ್ಚು ಮಾಜಿ ಸಚಿವರನ್ನು ಬಂಧಿಸಲಾಗಿದೆ ಎಂದು ಅಲ್ ಅರೇಬಿಯಾ ಟೀವಿ ವರದಿ ಮಾಡಿದೆ.

ಸಂಪುಟ ಪುನಾರಚನೆಯಲ್ಲಿ ರಾಷ್ಟ್ರೀಯ ಭದ್ರತಾ ಸಚಿವ ಸ್ಥಾನದಿಂದ ಯುವರಾಜ ಮಿತೆಬ್ ಬಿನ್ ಅಬ್ದುಲ್ಲಾ ಅವರನ್ನು ಬದಲಾಯಿಸಿ ಖಲೀದ್ ಬಿನ್ ಐಯಾಫ್ ಅವರನ್ನು ನೇಮಿಸಲಾಗಿದೆ. ಆರ್ಥಿಕ ಸಚಿವ ಅಡೆಲ್ ಫಕೀಹ್ ಅವರನ್ನು ಬದಲಾಯಿಸಿ ಉಪ ಸಚಿವ ಮೊಹಮ್ಮದ್ ಅಲ್ ತುವೈಜ್ರಿಯನ್ನು ನೇಮಿಸಿ ದೊರೆ ಸಲ್ಮಾನ್ ಆದೇಶ ಹೊರಡಿಸಿದ್ದಾರೆ.

2009ರ ಪ್ರವಾಹದಿಂದ ಜೆಡ್ಡಾ ನಗರಕ್ಕೆ ಉಂಟಾದ ಹಾನಿಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದ್ದು, ಹಳೆಯ ಪ್ರಕರಣಗಳಲ್ಲಿ ನಾಲ್ವರು ಸಚಿವರು ಮತ್ತು ಹತ್ತಕ್ಕೂ ಹೆಚ್ಚು ಮಾಜಿ ಸಚಿವರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಸರ್ಕಾರದ ಹಣ ಪೋಲಾಗದಂತೆ ನೋಡಿಕೊಳ್ಳುವುದು, ಭ್ರಷ್ಟ ವ್ಯಕ್ತಿಗಳನ್ನು ಶಿಕ್ಷಿಸುವುದು, ಅಧಿಕಾರ ದುರುಪಯೋಗ ತಡೆಯುವುದು ಭ್ರಷ್ಟಾಚಾರ ನಿಗ್ರಹ ಆಯೋಗ ರಚಿಸಿದ್ದರ ಉದ್ದೇಶವಾಗಿದೆ ಎಂದು ವರದಿ ತಿಳಿಸಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಸಚಿವರು ವಿದೇಶಕ್ಕೆ ಪಾರಾಗದಂತೆ ತಡೆಯಲು ಜೆಡ್ಡಾದಲ್ಲಿ ಖಾಸಗಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಯುವರಾಜರ ಬಂಧನ

ಏಕೆ?

ಸೌದಿ ಸಾಮ್ರಾಜ್ಯದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸುವ ಸಲುವಾಗಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಕಾರ್ಯತಂತ್ರ ರೂಪಿಸಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ ತಮ್ಮ ವಿರೋಧಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸೌದಿಯಲ್ಲಿ ರಾಜಕುಟುಂಬದ ಸದಸ್ಯರನ್ನು, ಸಚಿವರನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂಧಿಸಲು ದೊರೆ ಆದೇಶ ನೀಡಿರುವುದು ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ. ಸೌದಿ ರಾಜಮನೆತನ ಒಟ್ಟಾರೆ 15000 ಜನರನ್ನು ಒಳಗೊಂಡಿದೆ. ಆದರೆ ಅಧಿಕಾರ 2000 ಜನರ ಕೈಯಲ್ಲಿದೆ.