ಆ ಕ್ಲಾಸಿಕ್ ಹಾಡಿಗೆ ಇಂದು ಸಹ ವಯಸ್ಸಿನ ಮಿತಿ ಇಲ್ಲದೇ ಕುಣಿದು ಕುಪ್ಪಳಿಸುತ್ತಾರೆ.

ಸತ್ಯಹರಿಶ್ಚಂದ್ರ ಅಂದ್ರೆ ಎಲ್ಲರಿಗೂ ತಕ್ಷಣಕ್ಕೆ ನೆನಪಾಗುವುದು ನಟ ಎಂ ಪಿ ಶಂಕರ್ ಕುಣಿದು ಕುಪ್ಪಳಿಸಿದ ಕುಲದಲ್ಲಿ ಕೀಳ್ಯಾವುದೋ ಹಾಡು. ಆ ಕ್ಲಾಸಿಕ್ ಹಾಡಿಗೆ ಇಂದು ಸಹ ವಯಸ್ಸಿನ ಮಿತಿ ಇಲ್ಲದೇ ಕುಣಿದು ಕುಪ್ಪಳಿಸುತ್ತಾರೆ. ಈಗ ಅದೇ ಹಾಡಿಗೆ ಮೇಲುಕೋಟೆಯಲ್ಲಿ ಅರ್ಜುನ್ ಜನ್ಯ ಸಂಗೀತಕ್ಕೆ ಚಿಕ್ಕಣ್ಣ ಮತ್ತು ಶರಣ್ ಹೆಜ್ಜೆಯಾಕ್ಕಿದ್ದು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜಿಸಿದ್ದಾರೆ. ಸದ್ಯ ನಿರ್ದೇಶಕ ದಯಾಳ್ ಪದ್ಮನಾಭನ್ ಈ ಹಾಡನ್ನು ಮೂರು ದಿನಗಳಿಂದ ಮೇಲುಕೋಟೆಯಲ್ಲಿ ಚಿತ್ರೀಕರಿಸುತ್ತಿದ್ದಾರೆ.