ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸತೀಶ್‌ ಜಾರಕಿಹೊಳಿ ಸಿಎಂ ಆಗಬಹುದು ಎಂಬ ಹೇಳಿಕೆ ರಾಜಕಾರಣದ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಬಾಗಲಕೋಟೆ[ಡಿ.19]  ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ ಎಲ್ಲ ಸಮಾಜದವರಿಗೂ ಅವಕಾಶ ಬಂದೇ ಬರುತ್ತದೆ. ಮುಂದಿನ ದಿನಗಳಲ್ಲಿ ಯಾವ ಬದಲಾವಣೆ ಆಗುತ್ತದೆ ಕಾದು ನೋಡೋಣ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕಕ್ಕೆ ಸಚಿವ ಸ್ಥಾನ ಪಡೆದೇ ಅಭಿವೃದ್ಧಿ ಮಾಡಬೇಕೇನಿಲ್ಲ. ಸಚಿವರಾಗಿಯೇ ನ್ಯಾಯ ಕೊಡಸಬೇಕಿಲ್ಲ. ಸಚಿವ ಸ್ಥಾನ ಇರದಿದ್ದರೂ ಅಭಿವೃದ್ಧಿ ಮಾಡುವ ಶಕ್ತಿಯಿದೆ ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಟಾಂಗ್ ನೀಡಿದರು.

ಸಚಿವ ರಮೇಶ್ ಜಾರಕಿಹೊಳಿ ಅಧಿವೇಶನ ಮತ್ತು ಸಂಪುಟ ಸಭೆಗೆ ಗೈರಾಗುತ್ತಯಿರುವುದು ಅವರ ವೈಯಕ್ತಿಕ ವಿಚಾರ. ನಾನು ಅದರ ಬಗ್ಗೆ ಏನು ಹೇಳಲು ಸಾಧ್ಯ? ಸರ್ಕಾರ ಸುಭದ್ರವಾಗಿದೆ. ಸಚಿವ ಸ್ಥಾನ ನೀಡುವ ವಿಚಾರ ಹಿರಿಯ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದರು.