ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ. ಏನದು ಸುಳಿವು..?

ಬೆಳಗಾವಿ : ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಕ್ತಾಯವಾಗಿದ್ದು, ಸದ್ಯ ವಿಧಾನಸಭಾ ಉಪ ಚುನಾವಣೆ ಕಣ ರಂಗೇರಿವೆ. ಇದೇ ವೇಳೆ ಅತ್ತ ಬಿಜೆಪಿಗರು ಕಾಂಗ್ರೆಸಿನವರ ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುತ್ತಿರುವ ಬೆನ್ನಲ್ಲೇ ಇತ್ತ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಸುಳಿವು ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತದ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಜೊತೆಗೆ ಹಲವು ಶಾಸಕರಿದ್ದಾರೆ, ಅವರೆಲ್ಲಾ ಪಕ್ಷ ತೊರೆಯುತ್ತಾರೆ ಎನ್ನುವುದು ಸುಳ್ಳು. ಅದರಿಂದ ಸಮ್ಮಿಶ್ರ ಸರ್ಕಾರ ಯಾವುದೇ ತೊಂದರೆ ಇಲ್ಲ ಎಂದು ಸತೀಶ್ ಹೇಳಿದ್ದಾರೆ. 

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅವರು ಆಪರೇಷನ್ ಮಾಡಿದರೆ ಪ್ರತಿಯಾಗಿ ಆಪರೇಷನ್ ಮಾಡಲು ಜೆಡಿಎಸ್-ಕಾಂಗ್ರೆಸ್ ಗೂ ಶಕ್ತಿ ಇದೆ. ಸಮಯ ಬಂದಾಗ ನಮ್ಮ ಸಂಖ್ಯಾ ಬಲವನ್ನೂ ಕೂಡ ನಾವು ತೋರಿಸುತ್ತೇವೆ. ಸರ್ಕಾರ ಬೀಳುವ ಸ್ಥಿತಿಗೆ ಬಂದರೆ ಉಳಿಸಿಕೊಳ್ಳಲು ಆಪರೇಷನ್ ಮಾಡಲು ನಾವು ಸಿದ್ಧ ಎಂದಿದ್ದಾರೆ. 

ಇನ್ನು ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾವುದೇ ಸಮಕ್ಷೆಯೂ ಕೂಡ ಬಿಜೆಪಿಗೆ ಹೆಚ್ಚಿನ ಮೆಜಾರಿಟಿ ಬರುತ್ತದೆ ಎಂದು ಹೇಳಿಲ್ಲ ಎಂದರು.