ಬೆಂಗಳೂರು :  ಅತ್ತ ನಮ್ಮ ಸಿಎಂ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಶಾಸಕರು ಹೇಳಿಕೊಂಡರೆ, ಇತ್ತ ಸತೀಶ್ ಜಾರಕಿಹೊಳಿ ನಮ್ಮ ಸಿಎಂ ಎಂದು ಅವರ ಬೆಂಬಲಿಗರು ಅಭಿಯನವೊಂದನ್ನು  ಆರಂಭಿಸಿದ್ದಾರೆ

ನಮ್ಮ ಸಿಎಂ ಸಿದ್ದರಾಮಯ್ಯನವರೇ ಎಂಬ ಶಾಸಕರ ಹೇಳಿಕೆಗೆ ಪ್ರಚೋದನೆಗೊಂಡು ಸತೀಶ್ ಬೆಂಬಲಿಗರಿಂದ ಸಮಾಜಿಕ ಜಾಲತಾಣಗಳಲ್ಲಿ ನಮ್ಮ ಸಿಎಂ ಸತೀಶ್ ಜಾರಕಿಹೊಳಿ ಎಂದು ಅಭಿಯಾನ ನಡೆಯುತ್ತಿದೆ. 

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಅಭಿಮಾನಿಗಳು ಈ ಅಭಿಯಾನ ಆರಂಭ ಮಾಡಿದ್ದು, ವಿವಿಧ ವಾಟ್ಸಾಪ್ ಹಾಗೂ ಫೇಸ್ ಬುಕ್ ಪೇಜುಗಳಲ್ಲಿ ಈ ರೀತಿಯ ಬರಹಗಳು ಕಂಡು ಬರುತ್ತಿವೆ. 

ಈ ಹಿಂದೆ ಸತೀಶ್ ಸಿ ಎಂ ಯಾಕಾಗಬಾರದೂ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದರು. ಅಲ್ಲದೇ ಅವರ ಸಹೋದರ ರಮೇಶ್ ಜಾರಕಿಹೊಳಿ ಕೂಡ ಸತೀಶ್ ಸಿಎಂ ಆಗುವವರೆಗೂ  ಶ್ರಮಿಸುವುದಿಲ್ಲ ಎಂದಿದ್ದರು.  

ಆದರೆ ಇದೀಗ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಜಾರಕಿಹೊಳಿ ನಮ್ಮ ಸಿಎಂ ಎಂಬ ಅಭಿಯಾನ ಆರಂಭಿಸಿದ್ದಾರೆ. ಎಲ್ಲೆಡೆ ಈ ಅಭಿಯಾನದ ಬರರಹಗಳು ಸಾಕಷ್ಟು ವೈರಲ್ ಆಗುತ್ತಿದೆ.