ನಟ ನಿನಾಸಂ ಸತೀಶ್ ಮತ್ತೊಂದು ಹೊಸ ಹೆಜ್ಜೆ

Sathish Ninasam adopted the village
Highlights

ಹಳ್ಳಿಯ ಸಮಸ್ಯೆ ಬಗೆಹರಿಸಿ ಮಾದರಿ ಗ್ರಾಮವನ್ನಾಗಿ ಮಾಡಲು ಚಿಂತಿಸಿರುವ ನಟ ನಿನಾಸಂ ಸತೀಶ್ ಮಂಡ್ಯ ಜಿಲ್ಲೆ,ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಎಂಬ ಹಳ್ಳಿಯನ್ನು ದತ್ತು ಪಡೆದಿದ್ದಾರೆ.  

ಮಂಡ್ಯ : ಹಳ್ಳಿಯ ಸಮಸ್ಯೆ ಬಗೆಹರಿಸಿ ಮಾದರಿ ಗ್ರಾಮವನ್ನಾಗಿ ಮಾಡಲು ಚಿಂತಿಸಿರುವ ನಟ ನಿನಾಸಂ ಸತೀಶ್ ಮಂಡ್ಯ ಜಿಲ್ಲೆ,ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಎಂಬ ಹಳ್ಳಿಯನ್ನು ದತ್ತು ಪಡೆದಿದ್ದಾರೆ.  .

150 ಜನರ ಟೀಮ್ ಹೊಂದಿರುವ ಸತೀಶ್ ಪಿಕ್ಚರ್ ಹೌಸ್ ಅಡಿಯಲ್ಲಿ ಗ್ರಾಮ ದತ್ತು ಪಡೆದಿದ್ದು, ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಒಟ್ಟಾರೆ 400ಮನೆಗಳನ್ನ ಈ ಹಳ್ಳಿ ಹೊಂದಿದ್ದು, ಈ ಗ್ರಾಮದಲ್ಲಿ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುವ ಭರವಸೆ ನೀಡಿದ್ದಾರೆ. 

ಗ್ರಾಮದ ಪ್ರಾಥಮಿಕ ಸಮಸ್ಯೆಗಳಾದ ನೀರಿನ ಸಮಸ್ಯೆ ಬಗೆಹರಿಸುವುದು,  ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸುವುದಕ್ಕೆ ಸತೀಶ್ ನಿರ್ಧಾರ ಮಾಡಿದ್ದಾರೆ.  ನಟ ಸತೀಶ್ ನೀನಾಸಂ ಸತೀಶ್ ಅವರ ಈ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

loader