ಇದುವರೆಗೆ ತೆಲಂಗಾಣ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ಸಿಂಗ್ ಅವರನ್ನು ಬದಲಾಯಿಸಿ ಅವರ ಜಾಗಕ್ಕೆ ಆರ್.ಸಿ.ಕುಂಟಿಯಾ ಅವರನ್ನು ನೇಮಿಸಲಾಗಿದೆ

ನವದೆಹಲಿ(ಆ.02: ಇತ್ತೀಚೆಗಷ್ಟೇ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಸತೀಶ್ ಜಾರಕಿಹೊಳಿ ಅವರಿಗೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಜವಾಬ್ದಾರಿ ವಹಿಸಲಾಗಿದೆ. ಇದುವರೆಗೆ ತೆಲಂಗಾಣ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ಸಿಂಗ್ ಅವರನ್ನು ಬದಲಾಯಿಸಿ ಅವರ ಜಾಗಕ್ಕೆ ಆರ್.ಸಿ.ಕುಂಟಿಯಾ ಅವರನ್ನು ನೇಮಿಸಲಾಗಿದೆ.

ಅವರ ಜೊತೆಯಾಗಿ ಸತೀಶ್ ಜಾರಕಿಹೊಳಿ ಕಾರ್ಯನಿರ್ವಹಿಸಲಿದ್ದಾರೆ. ದಿಗ್ವಿಜಯ್ ಸಿಂಗ್ ಅವರನ್ನು ಇತ್ತೀಚೆಗಷ್ಟೇ ಗೋವಾ ಮತ್ತು ಕರ್ನಾಟಕ ಕಾಂಗ್ರೆಸ್ ಘಟಕಗಳ ಉಸ್ತುವಾರಿಯಿಂದ ಕೈಬಿಡಲಾಗಿತ್ತು. ಇದೀಗ ತೆಲಂಗಾಣದಿಂದಲೂ ಅವರನ್ನು ಕೈಬಿಡಲಾಗಿದೆ.