ಜಯಲಲಿತಾ ಅವರ ನಿಕಟವರ್ತಿ ಶಶಿಕಲಾ ಅವರು ಎಐಎಡಿಎಂಕೆ ಪಕ್ಷದ ಮುಂದಿನ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಶಶಿಕಲಾ ಅವರ ಆಯ್ಕೆ ಬಗ್ಗೆ ಪಕ್ಷದೊಳಗೆ ಯಾವುದೇ ಅಪಸ್ವರ ಇಲ್ಲ ಎಂಬುದಾಗಿ ಹೇಳಿದ್ದಾರೆ. ಜಯಾ ಅನುಪಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಬೇಕು ಎಂದು ಲೋಕಸಭೆ ಉಪಸಭಾಪತಿ ತಂಬಿದೊರೈ ನೇತೃತ್ವದ ನಿಯೋಗ ಮೊನ್ನೆ ಶಶಿಕಲಾರನ್ನು ಭೇಟಿ ಮಾಡಿತ್ತು. ಪುರುಚ್ಚಿ ತಲೈವಿ ಜಯಲಲಿತಾ ಅವ್ರ ಸ್ಥಾನ ಭರ್ತಿ ಮಾಡಲು, ಚಿನ್ನಮ್ಮ ಅಂದ್ರೆ ಶಶಿಕಲಾ ಅವರೇ ಸೂಕ್ತ ವ್ಯಕ್ತಿ. ಅವರು ನಮಗೆ ಮಾರ್ಗದರ್ಶನ ಮಾಡ ಬೇಕು. ಈ ಬಗ್ಗೆ ಅವರಿಗೆ ಕೋರಿಕೆ ಸಲ್ಲಿಸಿದ್ದೇವೆ ಎಂದು ತಂಬಿದೊರೈ ತಿಳಿಸಿದ್ದಾರೆ..

ಚೆನ್ನೈ(ಡಿ.15): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನದ ನಂತರ ತೆರವಾಗಿದ್ದ ಅಣ್ಣಾಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ನಿರೀಕ್ಷೆಯಂತೆ ಜಯಾ ಪರಮಾಪ್ತ ಗೆಳತಿ ಶಶಿಕಲಾ ನಟರಾಜನ್ ಅವರನ್ನು ಆಯ್ಕೆ ಮಾಡಲಾಗಿದೆ. ಶಶಿಕಲಾ ಅವರು ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಸಾರಥ್ಯ ವಹಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಸಿ.ಪೊನ್ನೈಯನ್ ತಿಳಿಸಿದ್ದಾರೆ.