ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಪಕ್ಕದ ಸೆಲ್ ನಲ್ಲಿರುವ ಸರಣಿ ಹತ್ಯೆ ಕೈದಿ ಸೈನೆಡ್ ಮಲ್ಲಿಕಾರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.

ಬೆಂಗಳೂರು (ಫೆ.22): ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಪಕ್ಕದ ಸೆಲ್ ನಲ್ಲಿರುವ ಸರಣಿ ಹತ್ಯೆ ಕೈದಿ ಸೈನೆಡ್ ಮಲ್ಲಿಕಾರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೈನೆ ಮಲ್ಲಿಕಾ ಸರಣಿ ಹತ್ಯೆಗೈದ ದೇಶದ ಮೊದಲ ಮಹಿಳೆಯಾಗಿದ್ದು 6 ಮಂದಿ ಮಹಿಳೆಯನ್ನು ಹತ್ಯೆಗೈದಿದ್ದಾರೆ. ದೇವಸ್ಥಾನಕ್ಕೆ ಬರುವ ಶ್ರೀಮಂತ ಮಹಿಳೆಯರ ಗೆಳೆತನ ಮಾಡಿ ಅವರಲ್ಲಿರುವ ಚಿನ್ನಾಭರಣಗಳನ್ನು ದೋಚಿಕೊಂಡು ಬಳಿಕ ಸೈನೈಡ್ ನಿಂದ ಸಾಯಿಸುತ್ತಿದ್ದಳು. ಹಲವಾರು ಪ್ರಕರಣಗಳಲ್ಲಿ ಈಕೆ ಅಪರಾಧಿಯಾಗಿದ್ದು 2008 ರಲ್ಲಿ ಬಂಧಿಸಲಾಗಿತ್ತು.

ಮಲ್ಲಿಕಾ ಶಶಿಕಲಾ ಜೊತೆ ಗೆಳೆತನ ಹೊಂದಿದ್ದು, ಭದ್ರತೆ ಕಾರಣಕ್ಕಾಗಿ ಆಕೆಯನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಊಟದ ಸಮಯದಲ್ಲಿ ಶಶಿಕಲಾಗೆ ಕ್ಯೂನಲ್ಲಿ ನಿಲ್ಲಲು ಬಿಡದೇ ಆಕೆಯೇ ಶಶಿಕಲಾಗೆ ಊಟ ತಂದು ಕೊಡುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.