ಪೆರೋಲ್ ಮುಗಿಸಿ ಶಶಿಕಲಾ ಪರಪ್ಪನ ಅಗ್ರಹಾರಕ್ಕೆ ವಾಪಸ್

First Published 12, Oct 2017, 4:54 PM IST
Sasikala leaves for Bengaluru prison as parole ends
Highlights

ಕರುಳು, ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪತಿ ನಟರಾಜನ್’ರವರನ್ನು ಭೇಟಿ ಮಾಡಲು 5 ದಿನಗಳ ಕಾಲ ಪೆರೋಲ್ ಮೇಲೆ ತೆರಳಿರುವ ಶಶಿಕಲಾ ಇಂದು ಬೆಂಗಳೂರಿನ  ಪರಪ್ಪನ ಅಗ್ರಹಾರ ತಲುಪಿದ್ದಾರೆ. ನಿನ್ನೆ ಅವರ ಪರೋಲ್ ಅವಧಿ ಮುಗಿದಿದೆ.  

ಚೆನ್ನೈ (ಅ.12): ಕರುಳು, ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪತಿ ನಟರಾಜನ್’ರವರನ್ನು ಭೇಟಿ ಮಾಡಲು 5 ದಿನಗಳ ಕಾಲ ಪೆರೋಲ್ ಮೇಲೆ ತೆರಳಿರುವ ಶಶಿಕಲಾ ಇಂದು ಬೆಂಗಳೂರಿನ  ಪರಪ್ಪನ ಅಗ್ರಹಾರ ತಲುಪಿದ್ದಾರೆ. ನಿನ್ನೆ ಅವರ ಪರೋಲ್ ಅವಧಿ ಮುಗಿದಿದೆ.  ಶಸ್ತ್ರ ಚಿಕಿತ್ಸೆ ನಂತರ ನಟರಾಜನ್ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕರುಳು ಮತ್ತು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ  ಪತಿ ನಟರಾಜನ್’ರವರನ್ನು ಭೇಟಿ ಮಾಡಲು ಎಐಎಡಿಎಂಕೆ ನಾಯಕಿ ಶಶಿಕಲಾ ಅ.06 ರಿಂದ 5 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು.    

ಶಶಿಕಲಾರವರು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ ಅವರ ಪೆರೋಲ್ ಅರ್ಜಿಯನ್ನು ಅಧಿಕಾರಿಗಳು ನಿರಾಕರಿಸಿದ್ದರು. ನಂತರ ಶಶಿಕಲಾ ಮತ್ತೊಂದು ಅರ್ಜಿ ಸಲ್ಲಿಸಿದ್ದು 5 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ನಿನ್ನೆ ಅವರ ಪೆರೋಲ್ ಅವಧಿ ಮುಕ್ತಾಯಗೊಂಡಿದೆ.

loader