ಚಿನ್ನಮ್ಮ ಇನ್ನು ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ನವದೆಹಲಿ(ಫೆ.14): ಆದಾಯ ಮೀರಿ ಆಸ್ತಿಗಳಿಕೆ ಮಾಡಿದ ಆರೋಪದಡಿ ಶಶಿಕಲಾನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರನ್ನು ಅಪರಾಧಿಗಳೆಂದು ಘೋಷಿಸಿ ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ತೀರ್ಪಿನ ಪರಿಣಾಮಗಳೇನು ಎಂದು ನೋಡುವುದಾದರೆ;

ಶಶಿಕಲಾಗೆ ನಾಲ್ಕು ವರ್ಷ ಜೈಲು ಶಿಕ್ಷೆ, 10 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ತಡಮಾಡದೆ ಬೆಂಗಳೂರು ಕೋರ್ಟ್'ಗೆ ಶಶಿಕಲಾ ಶರಣಾಗಬೇಕಿದೆ.

ಚಿನ್ನಮ್ಮ ಇನ್ನು ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಸದ್ಯಕ್ಕಂತೂ ಶಶಿಕಲಾ ಜೈಲಿಗೆ ಹೋಗದೆ ಬೇರೆ ದಾರಿಯಿಲ್ಲ. ಕೆಲವೇ ಕ್ಷಣಗಳಲ್ಲಿ ಚಿನ್ನಮ್ಮನ ಬಂಧನವಾಗಲಿದೆ.

ಸುಪ್ರೀಂ ತೀರ್ಪು ಪ್ರಶ್ನಿಸಿ ತ್ರಿಸದಸ್ಯ ಪೀಠಕ್ಕೆ ಮೇಲ್ಮನವಿ ಹೋಗಬಹುದು.

ಶಶಿಕಲಾ ಮೇಲ್ಮನವಿ ಅಂಗೀಕಾರವಾದರೆ, ಮತ್ತೆ ತೀರ್ಪು ವಿಚಾರಣೆ ಆರಂಭವಾಗಲಿದೆ.