ಜಯಲಲಿತಾ ನಿಧನದ ನಂತರ ಪಳಿನಿಸ್ವಾಮಿ ಹಾಗೂ ಪನ್ನೀರ್'ಸ್ವಾಮಿ ಬಣಗಳ ನಡುವೆ ಭಿನ್ನಮತವುಂಟಾಗಿ ಪನ್ನೀರ್ ಗುಂಪಿನವರೆಲ್ಲರನ್ನು ಉಚ್ಚಾಟಿಸಲಾಗಿತ್ತು. ಸದ್ಯ ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಚೆನ್ನೈ(ಏ.26): ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಭಾವಚಿತ್ರವುಳ್ಳ ಬ್ಯಾನರ್'ಗಳನ್ನು ಚೆನ್ನೈ'ನ ಮುಖ್ಯ ಕಚೇರಿಯಿಂದ ತೆರವುಗೊಳಿಸಲಾಗಿದೆ. ಈ ನಡೆಯನ್ನು ಪನ್ನೀರ್'ಸೆಲ್ವಂ ಬಣ ಸಕಾರಾತ್ಮಕ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.ಬ್ಯಾನರ್'ಗಳನ್ನು ತೆರವುಗೊಳಿಸಿರುವ ನಿರ್ಧಾರದಿಂದ ನಮಗೆ ಸಂತಸವಾಗಿದೆ' ಮುಂದಿನ ದಿನಗಳಲ್ಲಿ ಎರಡೂ ಬಣಗಳು ಒಂದುಗೂಡಲು ಈ ಕ್ರಮ ಉತ್ತಮ ಹೆಜ್ಜೆ ಎಂದು ಪನ್ನೀರ್ ಸೆಲ್ವಂ ಬಣದ ಮಾಧ್ಯಮ ಸಂಯೋಜಕರಾದ ಕೆ. ಸ್ವಾಮಿನಾಥನ್' ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred