ಬೆಂಗಳೂರಿನತ್ತ ತೆರಳುತ್ತಿರುವ ಚಿನ್ನಮ್ಮ ಮಾರ್ಗಮಧ್ಯೆ  ಜಯಲಲಿತಾ ಸಮಾಧಿಗೆ ಮೂರು ಬಾರಿ ಆಕ್ರೋಶದಿಂದ ತಟ್ಟಿ 3 ಶಪಥ ಮಾಡಿದ್ದಾರೆ.

ಚೆನ್ನೈ(ಫೆ.15): ಬೆಂಗಳೂರು ಕೋರ್ಟ್​ಗೆ ತೆರಳುವಂತೆ ಶಶಿಕಲಾಗೆ ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶರಣಾಗಲು ಈಗಾಗಲೆ ಬೆಂಗಳೂರಿನತ್ತ ತೆರಳುತ್ತಿರುವ ಚಿನ್ನಮ್ಮ ಮಾರ್ಗಮಧ್ಯೆ ಜಯಲಲಿತಾ ಸಮಾಧಿಗೆ ಮೂರು ಬಾರಿ ಆಕ್ರೋಶದಿಂದ ತಟ್ಟಿ 3 ಶಪಥ ಮಾಡಿದ್ದಾರೆ.

ಆ ಮೂರು ಶಪಥಗಳು ಇವು

ಶಪಥ 1 : ಅಮ್ಮ ನೀನು ಬೆಳಸಿರುವ ಪಕ್ಷವನ್ನು ಯಾವುದೇ ಕಾರಣದಿಂದ ಹೋಳಾಗಲು ಬಿಡುವುದಿಲ್ಲ

ಶಪಥ 2: ಅಮ್ಮ ನಿನಗೆ ದ್ರೋಹ ಮಾಡಿದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ

ಶಪಥ 3: ಅಮ್ಮ ಮತ್ತೆ ಜೈಲಿನಿಂದ ವಾಪಸ್ ಬರುತ್ತೇನೆ, ಸಿಎಂ ಆಗೇಆಗುತ್ತೇನೆ