ಪಕ್ಷದ ಕಚೇರಿ ಕೂಡಾ ಚಿನ್ನಮ್ಮ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದೆ.

ಚೆನ್ನೈ(ಫೆ.13): ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಸಿಎಂ ಗಾದಿಗೇರಲು ಹರಸಾಹಸ ಪಡುತ್ತಿರುವ ಶಶಿಕಲಾ, ಪಕ್ಷದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಪಕ್ಷದ ಕಚೇರಿ ಕೂಡಾ ಚಿನ್ನಮ್ಮ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದೆ. ಈ ಮೂಲಕ ಶಶಿಕಲಾ, ಪಕ್ಷದ ಮೇಲೆ ತನಗೆ ಹಿಡಿತವಿದೆ ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಪಕ್ಷದ ಅಧ್ಯಕ್ಷರನ್ನು ಶಶಿಕಲಾ ಉಚ್ಚಾಟಿಸಿದ್ದರು. ನಂತರ, ಉಚ್ಚಾಟನೆಗೊಂಡಿದ್ದ ಅಧ್ಯಕ್ಷ ಮಧುಸೂದನ್, ಶಶಿಕಲಾರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟಿಸಿದ್ದರು. ಇದಾದ ಮೇಲೆ ಪಕ್ಷದ ಟ್ವಿಟರ್​ ಖಾತೆಯಲ್ಲಿ ಕಾಣಿಸಿಕೊಂಡಿರುವ ಈ ಟ್ವೀಟ್, ಪಕ್ಷ ತಮ್ಮ ಜೊತೆಯಲ್ಲಿದೆ ಹಾಗೂ ಪಕ್ಷ ನನ್ನ ಹಿಡಿತದಲ್ಲಿದೆ ಎಂದು ಸಾಬೀತು ಪಡಿಸಲು ನಡೆಸಿದ ತಂತ್ರವಾಗಿದೆ. ಈ ಮೂಲಕ ತಮ್ಮ ಜೊತೆಯಲ್ಲಿರುವ ಶಾಸಕರು ಹಾಗೂ ಪನ್ನೀರ್ ಸೆಲ್ವಂ ಜೊತೆಯಲ್ಲಿರುವ ಶಾಸಕರಿಗೆ, ತಾನೇ ಪಕ್ಷದ ನಾಯಕಿ ಎಂಬ ಸಂದೇಶ ಸಾರಲು ಶಶಿಕಲಾ ಹೊರಟಿದ್ದಾರೆ.