ಡಬ್ಲ್ಯೂಇಎಫ್ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್

news | Friday, June 8th, 2018
Suvarna Web Desk
Highlights

ವಿಶ್ವ ಆರ್ಥಿಕ ವೇದಿಕೆ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್

ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್‌ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಭಾರತ, ಜಪಾನ್ ಮತ್ತು ಚೀನಾದಲ್ಲಿ ಹೊಸ ಕೇಂದ್ರಗಳ ಸ್ಥಾಪನೆಗೆ ನೇತೃತ್ವ

ಉದಯೋನ್ಮುಖ ತಂತ್ರಜ್ಞಾನಗಳ ಪ್ರಯೋಜನಕ್ಕೆ ಆದ್ಯತೆ ಎಂದ ನಾಯರ್

ನವದೆಹಲಿ(ಜೂ.8): ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಡಬ್ಲ್ಯೂಇಎಫ್ ಮಾಹಿತಿ ನೀಡಿದ್ದು, ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್‌ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸರಿತಾ ನಾಯರ್ ಅವರಿಗೆ ಈಗ ಹೆಚ್ಚುವರಿಯಾಗಿ ವ್ಯವಸ್ಥಾಪನಾ ಮಂಡಳಿಯ ಜವಾಬ್ದಾರಿ ನೀಡಲಾಗಿದೆ. 

ನಾಯರ್ ವ್ಯವಸ್ಥಾಪನಾ ಮಂಡಳಿ ಮೂಲಕ ವಿಶ್ವ ಆರ್ಥಿಕ ವೇದಿಕೆಯ ಅಂತರಾಷ್ಟ್ರೀಯ ವಿಸ್ತರಣೆಗೆ ನೆರವಾಗಲಿದ್ದಾರೆ. ಅಲ್ಲದೆ ಭಾರತ, ಜಪಾನ್ ಮತ್ತು ಚೀನಾದಲ್ಲಿ ವಿಶ್ವ ಆರ್ಥಿಕ ವೇದಿಯ ಹೊಸ ಕೇಂದ್ರಗಳ ಸ್ಥಾಪನೆಗೆ ನಾಯರ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

‘ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ನೇಮಕಗೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಉದಯೋನ್ಮುಖ ತಂತ್ರಜ್ಞಾನಗಳ ಪ್ರಯೋಜನಗಳನ್ನು ಗರಿಷ್ಠಗೊಳಿಸಲಾಗುವುದು, ಇದು ಅಪಾಯಗಳನ್ನು ಕಡಿಮೆಗೊಳಿಸುತ್ತದೆ, ಇದರಿಂದಾಗಿ ಫೋರಂ ವಿಮರ್ಶಾತ್ಮಕವಾಗಿ ಕೆಲಸ ಮಾಡುತ್ತದೆ’ ಎಂದು ನಾಯರ್ ಪ್ರತಿಕ್ರಿಯೆ ನೀಡಿದ್ದಾರೆ.

2007ರಲ್ಲಿ ಸರಿತಾ ನಾಯರ್ ವಿಶ್ವ ಆರ್ಥಿಕ ವೇದಿಕೆಗೆ ಸೇರಿದ್ದರು. ನವದೆಹಲಿಯ ಸೇಂಟ್ ಸ್ಟಿಫನ್ ಕಾಲೇಜಿನಿಂದ ಅರ್ಥಶಾಸ್ತ್ರ ಪದವಿ, ಐಐಎಂ ನಿಂದ ಸ್ನಾತಕೋತ್ತರ ಪದವಿ ಮತ್ತು ಮಿಚಗಿನ್ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

Comments 0
Add Comment

  Related Posts

  World Oral Health Day

  video | Tuesday, March 20th, 2018

  10 Rupee Coin News

  video | Monday, January 22nd, 2018

  World Oral Health Day

  video | Tuesday, March 20th, 2018
  nikhil vk