ನವದೆಹಲಿ [ಜು.22] : ಟ್ವಿಟ್ಟರ್ ನಲ್ಲಿ ಸಾರಿ ಚಾಲೇಂಜ್ ಟ್ರೆಂಡ್ ಆಗುತ್ತಿದೆ. ಹಲವು ಹೆಂಗಳೆಯರು ಚಾಲೇಂಜ್ ಸ್ವೀಕರಿಸಿ ಸೀರೆ ಉಟ್ಟ ಫೊಟೊಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

ಈ ಸಾಲಿಗೆ ಬಿಜೆಪಿ ನಾಯಕಿ ಸಂಸದೆ ಮನೇಕಾ ಗಾಂಧಿ ಕೂಡ ಸೇರಿದ್ದು, ತಮ್ಮ ಸೀರೆ ಫೊಟೊ ಶೇರ್ ಮಾಡುವುದರೊಂದಿಗೆ ವಿಶೇಷ ವಿಚಾರ ಹಂಚಿಕೊಂಡಿದ್ದಾರೆ. 

ಸುಲ್ತಾನ್ ಪುರ ಸಂಸದೆ ಮನೇಕಾ ಗಾಂಧಿ ತಮ್ಮ ಪುತ್ರ ವರುಣ್ ಗಾಂಧಿ ವಿವಾಹದ ಫೊಟೊವನ್ನು ಶೇರ್ ಮಾಡಿದ್ದು, ಈ ಸಂದರ್ಭದಲ್ಲಿ ತಾವು ಉಟ್ಟಿರುವ ಸೀರೆ 70 ವರ್ಷ ಹಳೆಯ ಸೀರೆ ಎಂದು ಬರೆದುಕೊಂಡಿದ್ದಾರೆ.

ತಾವು ಉಟ್ಟ ಗುಲಾಬಿ ಬಣ್ಣದ ಸೀರೆಯು ತಮ್ಮ ಮಾವ ಹಾಗೂ ಭಾರತದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರು ಅವರು ಜೈಲಿನಲ್ಲಿದ್ದಾಗ ನೇಯ್ದಿರುವುದು. ಈ ಸೀರೆ ತಮ್ಮ ಮಾವನವರಿಂದ ಉಡುಗೊರೆಯಾಗಿ ಬಂದಿರುವುದು ಎಂದು ಹೇಳಿದ್ದಾರೆ. 

ಇನ್ನು ಮದುವೆಯಲ್ಲಿ ತಮ್ಮ ಸೊಸೆ ಉಟ್ಟಿರುವ ಸೀರೆಯ ಬಗ್ಗೆಯ ಮನೇಕಾ ಗಾಂಧಿ ವಿಶೇಷ ಮಾಹಿತಿ ಹಂಚಿಕೊಂಡಿದ್ದು, ತಮ್ಮ ಅತ್ತೆ ಇಂದಿರಾ ಗಾಂಧಿ ತಮಗೆ ಮದುವೆಯಲ್ಲಿ ಉಡುಗೊರೆಯಾಗಿ ನೀಡಿದ ಸೀರೆಯನ್ನು ತಮ್ಮ ಸೊಸೆಗೆ ಮದುವೆ ಉಡುಗೊರೆಯಾಗಿ ನೀಡಿದ್ದಾಗಿ ತಿಳಿಸಿದ್ದಾರೆ.