ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ವೆಬ್'ಸೈಟ್'ಗಳಲ್ಲಿ ಸಿಖ್ ಸಮುದಾಯದ ಸರ್ದಾರ್ ಜೀಗಳನ್ನು ಮೂರ್ಖರ ರೀತಿ ಬಿಂಬಿಸಲಾಗುತ್ತಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಲಾಗಿತ್ತು.
ನವದೆಹಲಿ(ಫೆ.07): ಜನಪ್ರಿಯ ಸರ್ದಾರ್ ಜೀ ಜೋಕ್ಸ್‌ಗಳನ್ನು ನಿಷೇಧಿಸುವುದು ಅಸಾಧ್ಯ ಎಂದು ಸುಪ್ರೀಂಕೋರ್ಟ್ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.
ಸಿಖ್ ಸಮುದಾಯದ ಕುರಿತಾದ ಜೋಕ್ಸ್ ಮಾಡದಂತೆ ನೈತಿಕ ಆದೇಶಗಳನ್ನು ಹೊರಡಿಸುವುದು ಕಷ್ಟ, ಕಾರಣ ಇವುಗಳನ್ನು ಜಾರಿ ಮಾಡುವುದು ಕಷ್ಟ ಎಂದು ನ್ಯಾಯಾಲಯ ಹೇಳಿದೆ.
ಈ ಬಗ್ಗೆ ವಕೀಲ ಹರ್ವಿಂದರ್ ಚೌಧರಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾ ದೀಪಕ್ ಮಿಶ್ರಾ ಮತ್ತು ನ್ಯಾ. ಆರ್ ಭಾನುಮತಿ ಅವರಿದ್ದ ಪೀಠ, ಇಂಥ ಆದೇಶ ಹೊರಡಿಸಿದರೂ, ಅದನ್ನು ರಸ್ತೆಯಲ್ಲಿ ನಿಂತು ಜಾರಿ ಮಾಡುವವರು ಯಾರು ಎಂದು ಪ್ರಶ್ನಿಸಿತು. ಆದರೆ ಆನ್'ಲೈನ್ ಸಾಮಾಜಿಕ ಜಾಲತಾಣಗಳು, ಮೊಬೈಲ್‌ಗಳಲ್ಲಿ ಇವುಗಳನ್ನು ನಿಷೇಧಿಸಬೇಕೆಂಬ ಕುರಿತು ಶೀಘ್ರ ಆದೇಶ ನೀಡುವುದಾಗಿ ಹೇಳಿತು.
ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ವೆಬ್'ಸೈಟ್'ಗಳಲ್ಲಿ ಸಿಖ್ ಸಮುದಾಯದ ಸರ್ದಾರ್ ಜೀಗಳನ್ನು ಮೂರ್ಖರ ರೀತಿ ಬಿಂಬಿಸಲಾಗುತ್ತಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಲಾಗಿತ್ತು.