ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲ್, ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸುಮಾರು 500 ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟ ವ್ಯವಸ್ಥೆಗೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನವದೆಹಲಿ (ಅ.14): ದೇಶದ ಪ್ರಥಮ ಗೃಹ ಮಂತ್ರಿ ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮದಿನವನ್ನು ದೇಶದಾದ್ಯಂತ ಅದ್ದೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅ.31ರಂದು ಪಟೇಲರ 141ನೇ ಜನ್ಮದಿನವನ್ನು ‘ರಾಷ್ಟ್ರೀಯ ಐಕ್ಯತಾ ದಿನ’ವೆಂದು ಆಚರಿಸಲಾಗುವುದು ಹಾಗೂ ಆ ಸಂದರ್ಭದಲ್ಲಿ ಪ್ರತಿಜ್ಞಾ ಸ್ವೀಕಾರ ಹಾಗೂ ಮ್ಯಾರಥಾನ್’ಗಳನ್ನು ಹಮ್ಮಿ ಕೊಲ್ಳಲಾಗುವುದು ಎಂದು ಏಎನ್ಐ ವರದಿ ಮಾಡಿದೆ.
ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಟೇಲರ ಬಗ್ಗೆ ‘ಡಿಜಿಟಲ್ ಪ್ರದರ್ಶನ’ವನ್ನು ಉದ್ಘಟಿಸಲಿದ್ದಾರೆ ಹಾಗೂ ಕೇಂದ್ರ ಸಚಿವರು ಬೇರೆ ಬೇರೆ ರಾಜ್ಯಗಳಲ್ಲಿ ಯಾತ್ರೆಗಳನ್ನು ಮುನ್ನಡೆಸಲಿದ್ದಾರೆ,
ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲ್, ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸುಮಾರು 500 ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟ ವ್ಯವಸ್ಥೆಗೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ನರ್ಮದಾ ನದಿ ತೀರದಲ್ಲಿ ಪಟೇಲರ ಅತೀ ಎತ್ತರರದ ಉಕ್ಕಿನ ಪ್ರತಿಮೆ ಪ್ರತಿಷ್ಠಾಪಿಸುವ ಯೋಜನೆ ಆರಂಭಿಸಿದ್ದರು.