ಮೋದಿ 6 ವರ್ಷಗಳಲ್ಲಿ 9 ಸಾವಿರ ಟ್ವೀಟ್ ಮಾಡಿದ್ದಾರೆ. ಅವರು ಮಾಡುವ ವ್ಯಂಗ್ಯ, ತಮಾಷೆ ಹಾಗೂ ಚುಚ್ಚುಮಾತಿನ ಟ್ವೀಟ್‌'ಗಳು ಜನರ ಮನಗೆದ್ದಿದ್ದು, ರೀ ಟ್ವೀಟ್ ಆಗಿವೆ ಎಂದು ಸಂಶೋಧನಾ ವರದಿ ತಿಳಿಸಿದೆ.

ವಾಷಿಂಗ್ಟನ್(ನ.17) ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್‌'ನಲ್ಲಿ 3.6 ಕೋಟಿ ಹಿಂಬಾಲಕರ ಮೂಲಕ ದೇಶದಲ್ಲೇ ಅತಿ ಹೆಚ್ಚು ‘ಫಾಲೋವರ್ಸ್‌’ ಹೊಂದಿದ ರಾಜಕೀಯ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಮೋದಿ ಏಕೆ ಟ್ವೀಟರ್‌'ನಲ್ಲಿ ಈ ಪರಿ ಜನಪ್ರಿಯರಾಗಿದ್ದಾರೆ ಎಂದು ಗೊತ್ತಾ? ಮೋದಿ ಅವರು ತಮ್ಮ ಟ್ವೀಟ್‌'ಗಳಲ್ಲಿ ತಮಾಷೆ ಹಾಗೂ ಚುಚ್ಚು ಮಾತುಗಳನ್ನು ಬಳಸುವುದರಿಂದಲೇ ಅನೇಕಾನೇಕ ಜನ ಅವರನ್ನು ಹಿಂಬಾಲಿಸುವಂತಾಗಿದೆ ಎಂದು ಅಮೆರಿಕದ ಮಿಷಿಗನ್ ವಿವಿಯ ಸಂಶೋಧಕರ ತಂಡವೊಂದು ಸಂಶೋಧನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿ 6 ವರ್ಷಗಳಲ್ಲಿ 9 ಸಾವಿರ ಟ್ವೀಟ್ ಮಾಡಿದ್ದಾರೆ. ಅವರು ಮಾಡುವ ವ್ಯಂಗ್ಯ, ತಮಾಷೆ ಹಾಗೂ ಚುಚ್ಚುಮಾತಿನ ಟ್ವೀಟ್‌'ಗಳು ಜನರ ಮನಗೆದ್ದಿದ್ದು, ರೀ ಟ್ವೀಟ್ ಆಗಿವೆ ಎಂದು ಸಂಶೋಧನಾ ವರದಿ ತಿಳಿಸಿದೆ. ಮೋದಿ ಅವರ ಟ್ವೀಟ್‌'ಗಳನ್ನು 9 ಭಾಗ ಮಾಡಿ ಸಂಶೋಧನೆ ನಡೆಸಲಾಗಿದೆ.

ಚುನಾವಣೆ ಹಾಗೂ ಪ್ರಚಾರದ ಸಂದರ್ಭದಲ್ಲಿ ಮಾಡಿದ್ದ ವ್ಯಂಗ್ಯ ಹಾಗೂ ಚುಚ್ಚುಮಾತಿನ ಟ್ವೀಟ್'ಗಳಿಗೆ ಹೆಚ್ಚು ಸ್ಪಂದನೆ ದೊರೆತಿದೆ ಎಂದು ಹೇಳಿದೆ.