ಬೆಂಗಳೂರು (ಜೂ.18): 2001ರ ಅಪಹರಣ ಹಾಗೂ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇತ್ತೀಚೆಗೆ ಪೊಲೀಸರಿಗೆ ಶರಣಾಗಿದ್ದ 'ಶರವಣ ಹೊಟೇಲ್' ಮಾಲೀಕ ರಾಜಗೋಪಾಲ್ ಇಂದು ಕೊನೆಯುಸಿರೆಳೆದಿದ್ದಾರೆ. 

ಅನಾರೋಗ್ಯದ ನಿಮಿತ್ತ ಜೀವಾವಧಿ ಶಿಕ್ಷೆ ಅನುಭವಿಸಲು ಸಮಯವಕಾಶ ಕೇಳಿದ್ದ ರಾಜಗೋಪಾಲ್‌ ಬೇಡಿಕೆಯನ್ನು ಕೋರ್ಟ್ ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ಇತ್ತೀಚೆಗೆ ವೆಂಟಿಲೇಟರ್‌ನೊಂದಿಗೆ  ಮದ್ರಾಸ್ ಹೈಕೋರ್ಟಿಗೆ ಅವರು ಹಾಜರಾಗಿದ್ದರು. ಕೃತಕ ಉಸಿರಾಟ ವ್ಯವಸ್ಥೆಯಲ್ಲಿಯೇ ನ್ಯಾಯಾಲಕ್ಕೂ ಶರಣಾಗಿದ್ದರು. ಅತೀವ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಪುನಾಃ ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.

ವೆಂಟಿಲೇಟರ್‌ನಲ್ಲೇ ಶರವಣ ಭವನ ರಾಜಗೋಪಾಲ್ ಶರಣು!

2001ರಲ್ಲಿ ತಮ್ಮ ಸುಪ್ರಸಿದ್ಧ ಶರವಣ ಭವನ ಹೊಟೇಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಾಂತಕುಮಾರ್ ಅವರ ಪತ್ನಿಯನ್ನು ಮದುವೆಯಾಗಲು ಇಚ್ಛಿಸಿದ್ದರು ರಾಜಗೋಪಾಲ್. ಇದಕ್ಕೆ ಶಾಂತಕುಮಾರ್ ಅಡ್ಡಿಯಾಗಿದ್ದರು ಎನ್ನುವ ಕಾರಣಕ್ಕೆ, ಅವರನ್ನು ಅಪಹರಣಗೈದು, ಕೊಲೆಗೆ ಸುಫಾರಿ ಕೊಟ್ಟಿದ್ದರು. 

'ಸರವಣ ಭವನ'ದಿಂದ ಜೈಲಿಗೆ, ರಾಜಗೋಪಾಲ್ ಜೀವನದಲ್ಲಿ ಏನೇನಾಯ್ತು?

ಈ ಹೀನ ಕೃತ್ಯಕ್ಕೆ ಸಂಬಂಧಿಸಿದಂತೆ ರಾಜಗೋಪಾಲ್ ದೋಷಿ ಎಂದು ಸಾಬೀತಾಗಿದ್ದು, ಒಟ್ಟು 8 ಮಂದಿಗೆ ಸ್ಥಳೀಯ ನ್ಯಾಯಾಲಯ 10 ವರ್ಷ ವಿಧಿಸಿದ ಕಾರಾಗೃಹ ಶಿಕ್ಷೆಯನ್ನು 2009ರಲ್ಲಿ ಮದ್ರಾಸ್ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಪರವರ್ತಿಸಿ, ಆದೇಶಿಸಿತ್ತು.