ಬಿಜೆಪಿಯ ಯುವ ಮುಖಂಡರೂ ಆಗಿರುವ ಸಪ್ತಗಿರಿ ಗೌಡರ ವಿರುದ್ಧ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗುತ್ತಾ ಎಂದು ಕಾದು ನೋಡಬೇಕು.
ಬೆಂಗಳೂರು(ನ. 21): ಬಿಜೆಪಿಯ ಮಾಜಿ ಶಾಸಕರೊಬ್ಬರ ಮಗನೀಗ ಭೂವಿವಾದಲ್ಲಿ ಸಿಲುಕಿದ್ದಾರೆ. ಮಾಜಿ ಸಚಿವ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ಅವರು ಬಡವರಿಂದ ಭೂಮಿ ಖರೀದಿಸಿ ಸರ್ಕಾರಿ ಷರತ್ತುಗಳನ್ನು ಮೀರಿ ಸ್ವತ್ತನ್ನ ತನ್ನದಾಗಿಸಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ. ಅದಕ್ಕೆ ಸಂಬಂಧಿಸಿದ ಎಕ್ಸ್'ಕ್ಲೂಸಿವ್ ದಾಖಲೆಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.
ಬಡವರನ್ನು ಒಕ್ಕಲೆಬ್ಬಿಸಿ 20 ಎಕರೆ ಜಮೀನು ಸ್ವಾಹ?
ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸರ್ವೆ ನಂಬರ್ 17ರ ಮಾಡಬಾಳ ಹೋಬಳಿಯಲ್ಲಿನ ಬರೋಬ್ಬರಿ 20 ಎಕರೆ ಸರ್ಕಾರಿ ಗೋಮಾಳವನ್ನು ತನ್ನ ತಂದೆಯ ರಾಜಕೀಯ ಶಕ್ತಿ ಬಳಸಿಕೊಂಡು ಸಪ್ತಗಿರಿ ಗೌಡ ತನ್ನ ಹೆಸರಿಗೆ ಮಂಜೂರಿ ಮಾಡಿಸಿಕೊಂಡಿದ್ದಾರೆ. ತೊಂಬತ್ತರ ದಶಕದಲ್ಲಿ ಸರ್ಕಾರಿ ಗೋಮಾಳದಲ್ಲಿ ಬಡವರು ಬಗರ್'ಹುಕ್ಕುಂ ಸಾಗುವಳಿ ಮಾಡ್ತಿದ್ರು. ಆದ್ರೆ ರಾಮಚಂದ್ರೇಗೌಡರ ಪುತ್ರ ಆ ಬಡ ರೈತರಿಂದ ಭೂಮಿ ಮಂಜೂರಾದ 15 ವರ್ಷದೊಳಗೆ ಬರೋಬ್ಬರಿ 19 ಎಕರೆ 34 ಗುಂಟೆ ಜಾಗವನ್ನ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಅನ್ನೋದು ಸಾಮಾಜಿಕ ಹೋರಾಟಗಾರ ಹೆಮಂತರಾಜು ಆರೋಪ.
ಇಷ್ಟೇ ಅಲ್ಲ, ಸರ್ವೆ ನಂಬರ್ 17ರಲ್ಲಿ ಬರೋ 165 ಎಕರೆ ಜಾಗವು ಸಪ್ತಗಿರಿ ಗೌಡರ ಕಡೆಯವರ ಗೋಲ್ಮಾಲ್'ಗೆ ತುತ್ತಾಗುವ ಅಪಾಯವಿದೆ ಎನ್ನಲಾಗಿದೆ. ದಾಖಲೆ ಸಮೇತ ಸುವರ್ಣನ್ಯೂಸ್ ಈ ಹಗರಣ ಬಿಚ್ಚಿಟ್ಟಿದೆ. ಬಿಜೆಪಿಯ ಯುವ ಮುಖಂಡರೂ ಆಗಿರುವ ಸಪ್ತಗಿರಿ ಗೌಡರ ವಿರುದ್ಧ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗುತ್ತಾ ಎಂದು ಕಾದು ನೋಡಬೇಕು.
- ರವಿ ಶಿವರಾಮ್, ಪೋಲಿಟಿಕಲ್ ಬ್ಯೂರೊ ಸುವರ್ಣ ನ್ಯೂಸ್
