ನವದೆಹಲಿ [ಜು.07]:   ಡ್ಯಾನ್ಸರ್, ನಟಿ  ಸಪ್ನಾ ಚೌಧರಿ  ಅಧಿಕೃತವಾಗಿ ಇಂದು ದಿಲ್ಲಿಯಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 

 ಕೇಂದ್ರ ಸಚಿವ ಹರ್ಷವರ್ಧನ್, ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ನೇತೃತ್ವದಲ್ಲಿ ಸಪ್ನಾ ಪಕ್ಷ ಸೇರಿದರು. 

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಪ್ನಾ ಚೌಧರಿ  ಮನೋಜ್ ತಿವಾರಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲಗೊಂಡಿದ್ದರು. ಅಲ್ಲದೇ ನಟಿ ಹಾಗೂ ಡ್ಯಾನ್ಸರ್ ಆಗಿರುವ ಸಪ್ನಾ, ತಾವು ಪ್ರಚಾರ ಕಾರ್ಯದಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದು, ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿದ್ದರು. 

ಆದರೆ ಇದೀಗ ದಿಲ್ಲಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ, ಇನ್ನು ಈ ಹಿಂದೆ ಸಪ್ನಾ ಕಾಂಗ್ರೆಸ್ ಸೇರಲಿದ್ದಾರೆ ಎಂದೂ ಸುದ್ದಿಯಾಗಿತ್ತು.