ಮೈಸೂರು, ನೆಲಮಂಗಲದಲ್ಲಿ ಪ್ರತ್ಯೇಕ ಅಪಘಾತ: 8 ಸಾವು

First Published 14, Mar 2018, 5:30 PM IST
Saparate Accident at Mysore and Nelamangala 8 Dead
Highlights

ನೆಲಮಂಗಲದ ಟೋಲ್'ಗೇಟ್ ಬಳಿ ಲಾರಿ ಹಾಗೂ ಬಸ್ ನಡುವೆ ಕಾರು ಸಿಲುಕಿ  ನಾಲ್ವರು ಮೃತಪಟ್ಟಿದ್ದಾರೆ.

ಮೈಸೂರು/ನೆಲಮಂಗಲ(ಮಾ.14):  ಮೈಸೂರು ಹಾಗೂ ನೆಲಮಂಗಲದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಮೈಸೂರಿನ ಟಿ.ನರಸೀಪುರದ ದೊಡ್ಡಆಲದ ಮರದ ಬಳಿ 2 ಖಾಸಗಿ ಬಸ್ ಹಾಗೂ 1 ಕಾರಿನ ಮಧ್ಯೆ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೆಲಮಂಗಲದ ಟೋಲ್'ಗೇಟ್ ಬಳಿ ಲಾರಿ ಹಾಗೂ ಬಸ್ ನಡುವೆ ಕಾರು ಸಿಲುಕಿ  ನಾಲ್ವರು ಮೃತಪಟ್ಟಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loader