’ಸೂಪರ್ ಕಂಪ್ಯೂಟರ್ ಕೋಡಿಂಗ್‌ಗೆ ಸಂಸ್ಕೃತ ಬಳಕೆ’..!

Sanskrit can be used super computer coding: Ananth Kumar Hegde
Highlights

ಸೂಪರ್ ಕಂಪ್ಯೂಟರ್ ಕೋಡಿಂಗ್‌ಗೆ ಸಂಸ್ಕೃತ ಬಳಕೆ

ಕೇಂದ್ರ ಸಚಿವ ಅನಂರ್ ಕುಮಾರ್ ಹೆಗಡೆ

ಸಂಸ್ಕೃತ ಭಾಷೆಯ ಮಹತ್ವ ಜಗತ್ತಿಗೆ ಗೊತ್ತಿದೆ

ಭಾರತೀಯರು ಮಾತ್ರ ಇಂಗ್ಲಿಷ್ ವ್ಯಾಮೋಹ ಬಿಟ್ಟಿಲ್ಲ
 

ಕೋಲ್ಕತಾ(ಜೂ.21): ಭವ್ಯ ಭಾರತದ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದಾದ ಸಂಸ್ಕೃತ ಭಾಷೆಯನ್ನು ಭವಿಷ್ಯದ ಸೂಪರ್ ಕಂಪ್ಯೂಟರ್‌ಗಳ ಕೋಡಿಂಗ್ ಗಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಕೋಲ್ಕತಾದಲ್ಲಿ ನಡೆದ ಕೌಶ್ಯಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜ್ಞಾನಿಗಳು ಸಂಸ್ಕೃತ ಭಾಷೆಯನ್ನು ಸೂಪರ್ ಕಂಪ್ಯೂಟರ್‌ಗಳ ಕೋಡಿಂಗ್‌ಗಾಗಿ ಬಳಕೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಆದರೆ ನಾವು ಇನ್ನೂ ಇಂಗ್ಲಿಷ್ ಭಾಷೆ ಮೇಲೆ ಅವಲಂಭಿತರಾಗಿದ್ದು, ನಮ್ಮದೇ ಐತಿಹಾಸಿಕ ಭಾಷೆ ಸಂಸ್ಕೃತದ ಮಹತ್ವ ತಿಳಿದ ವಿದೇಶಿಗರು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಹೇಳಿದರು. 

ಸಂಸ್ಕೃತದ ಮಹತ್ವ ಅರಿತಿರುವ ಹಲವು ದೇಶಗಳು ಈಗಗಾಲೇ ತಮ್ಮ ಪ್ರಜೆಗಳಿಗೆ ಈ ಭಾಷೆಯನ್ನು ಕಲಿಸುತ್ತಿದ್ದು, ಯೂರೋಪಿನ ಹಲವು ದೇಶಗಳ ವಿವಿಯಲ್ಲಿ ಸಂಸ್ಕೃತವನ್ನು ಬೋಧಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಕೌಶಲ್ಯ ಅಭಿವೃದ್ಧಿಯ ತನ್ನ ಕಾರ್ಯಕ್ರಮಗಳಲ್ಲಿ ಸಂಸ್ಕೃತ ಬೋಧನೆ ಸೇರಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ. ಇದಕ್ಕಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಎಂಬ ಸಂಸ್ಥೆಯನ್ನು ತೆರಯಲಿದ್ದು, ಇದು ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಲಿದೆ ಎಂದು ಸಚಿವರು ಹೇಳಿದರು. 

ಕಾನ್ಪುರದಲ್ಲಿ ಐಐಎಸ್ ಸಂಸ್ಥೆಗೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಅಂತೆಯೇ ಪ್ರತೀಯೊಂದು ರಾಜ್ಯದಲ್ಲೂ ಈ ಐಐಎಸ್ ಸಂಸ್ಥೆಯನ್ನು ತೆರಯಾಲಾಗುತ್ತದೆ. ಈ ಸಂಬಂಧ ಪ್ರತೀ ರಾಜ್ಯಕ್ಕೂ ಕೇಂದ್ರ ಸರ್ಕಾರ ನಿರ್ಧಿಷ್ಟ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲಿದೆ ಎಂದು ಅನಂತ್ ಕುಮಾರ್ ಹೆಗಡೆ ಮಾಹಿತಿ ನೀಡಿದರು.

loader