ಇವನ್ ಸಿಂಡ್ರಮ್ನಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ನಟ ರಾಕೇಶ್(21) ನಿಧನರಾಗಿದ್ದಾರೆ.
ಬೆಂಗಳೂರು (ಅ.02): ಇವನ್ ಸಿಂಡ್ರಮ್ನಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ನಟ ರಾಕೇಶ್(21) ನಿಧನರಾಗಿದ್ದಾರೆ.
ಇವನ್ ಸಿಂಡ್ರಮ್ನಿಂದ ಬಳಲುತ್ತಿದ್ದ ನಟ ರಾಕೇಶ್ ಕಳೆದ 2 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಸಂಜೆ 7.30ಕ್ಕೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ರಾಕೇಶ್, ಹಿರಿಯ ನಟಿ ಆಶಾರಾಣಿ ಪುತ್ರ. ಚೆಲುವಿನ ಚಿತ್ತಾರ ಸೇರಿ ಹಲವು ಚಿತ್ರದಲ್ಲಿ ನಟಿಸಿದ್ದರು. ಚೆಲುವಿನ ಚಿತ್ತಾರ ಚಿತ್ರದಲ್ಲಿ ಬುಲ್ಲಿ ಪಾತ್ರದಲ್ಲಿ ಅಭಿನಯಿಸಿದ್ದರು. ಧೂಮಪಾನ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು.
