ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, ಮಾಜಿ ಉಪ ಮೇಯರ್‌ ಮಹದೇವಪ್ಪ, ವಿ.ಪ. ಸದಸ್ಯ ಸಂದೇಶ್‌ ನಾಗರಾಜ್‌ ಅವರ ಪುತ್ರ ಸಂದೇಶ್‌, ಜೆಡಿಎಸ್‌ ಮುಖಂಡ ರಾಮಕೃಷ್ಣ ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು.

ಮೈಸೂರು: ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, ಮಾಜಿ ಉಪ ಮೇಯರ್‌ ಮಹದೇವಪ್ಪ, ವಿ.ಪ. ಸದಸ್ಯ ಸಂದೇಶ್‌ ನಾಗರಾಜ್‌ ಅವರ ಪುತ್ರ ಸಂದೇಶ್‌, ಜೆಡಿಎಸ್‌ ಮುಖಂಡ ರಾಮಕೃಷ್ಣ ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ನವಶಕ್ತಿ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಿಜೆಪಿಯ ಬಾವುಟ ನೀಡುವ ಮೂಲಕ ಬಿಜೆಪಿಗೆ ಬರ ಮಾಡಿಕೊಳ್ಳಲಾಯಿತು.

ಈ ವೇಳೆ ಸಂದೇಶ್‌ ಸ್ವಾಮಿ ಅವರು ಅಮಿತ್‌ ಶಾ ಅವರಿಗೆ ಕೃಷ್ಣನ ವಿಗ್ರಹ, ಹಾರ ಮತ್ತು ಶಾಲು ಹೊದಿಸಿ ಸನ್ಮಾನಿಸಿದರು. ಮಾ.29ರಂದು ಸಂದೇಶ್‌ ಸ್ವಾಮಿ ಅವರು ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವ ಮತ್ತು ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.