ರಾಜ್ಯದ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯಾದ ‘ಕನ್ನಡಪ್ರಭ’ ದಿನಪತ್ರಿಕೆ ಹಾಗೂ ‘ಸುವರ್ಣ ಸುದ್ದಿ ವಾಹಿನಿ’ ಸೆ.15ರಿಂದ 4 ದಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ‘ಇಂಡಿಯಾ ಫರ್ನಿಚರ್ ಆ್ಯಂಡ್ ಹೋಮ್ ಡೆಕೋರ್ ಎಕ್ಸ್‌ಪೋ’ ಆಯೋಜಿಸಿದೆ.
ಬೆಂಗಳೂರು: ರಾಜ್ಯದ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯಾದ ‘ಕನ್ನಡಪ್ರಭ’ ದಿನಪತ್ರಿಕೆ ಹಾಗೂ ‘ಸುವರ್ಣ ಸುದ್ದಿ ವಾಹಿನಿ’ ಸೆ.15ರಿಂದ 4 ದಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ‘ಇಂಡಿಯಾ ಫರ್ನಿಚರ್ ಆ್ಯಂಡ್ ಹೋಮ್ ಡೆಕೋರ್ ಎಕ್ಸ್ಪೋ’ ಆಯೋಜಿಸಿದೆ.
ಇಂಡಿಯಾ ಈವೆಂಟ್ಸ್ ಮತ್ತು ಎಕ್ಸಿಬಿಷನ್ಸ್ ಸಂಸ್ಥೆಯ ಸಹಯೋಗದಲ್ಲಿ 4 ದಿನಗಳ ಕಾಲ ನಡೆಯಲಿರುವ ಈ ಎಕ್ಸ್ಪೋಗೆ ಚಿತ್ರನಟಿ ರಾಧಿಕಾ ಚೇತನ್ ಚಾಲನೆ ನೀಡಿದ್ದಾರೆ.

ಇಂಡಿಯಾ ಫರ್ನಿಚರ್ ಆ್ಯಂಡ್ ಹೋಮ್ ಡೆಕೋರ್ ಎಕ್ಸ್’ಪೋ ಪ್ರತಿ ಮನೆ ಮನೆಗೆ ಅವಶ್ಯವಿರುವ ಫರ್ನೀಚರ್ ಖರೀದಿಗೆ ಅವಕಾಶವಿದೆ. ದೇಶದ ಪ್ರತಿಷ್ಠಿತ ಫರ್ನೀಚರ್ ಮತ್ತು ಗೃಹ ಅಲಂಕಾರಿಕ ಕಂಪನಿಗಳು ಅತ್ಯದ್ಭುತ ವಿನ್ಯಾಸಗಳ ಉತ್ಪನ್ನಗಳನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ತಮ್ಮ ಮನೆಗಳಿಗೆ ಒಪ್ಪುವ ಆರಾಮದಾಯಕ ಸೋಫಾ ಸೆಟ್ಗಳು, ನವನವೀನ ಒಳಾಂಗಣ ವಿನ್ಯಾಸ, ಮನೆ ಬೆಳಗುವ ಅಲಂಕಾರಿಕ ವಿದ್ಯುತ್ ದೀಪಗಳು ಸೇರಿದಂತೆ ಅಲಂಕರಿಸಲು ಬೇಕಾಗುವ ಎಲ್ಲ ಅಗತ್ಯ ವಸ್ತುಗಳು ಇಲ್ಲಿ ಲಭ್ಯವಿದೆ.
ಸ್ಥಳದಲ್ಲೇ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳು ಸಾಲ ಸೌಲಭ್ಯವೂ ಕೂಡಾ ಲಭ್ಯವಿದೆ. ಈ ಇಂಡಿಯಾ ಫರ್ನಿಚರ್ ಆ್ಯಂಡ್ ಹೋಮ್ ಡೆಕೋರ್ ಎಕ್ಸ್ಪೋ ಸೆ.18ರ ವರೆಗೆ ನಡೆಯಲಿದೆ. ಉಚಿತ ಪ್ರವೇಶ ಮತ್ತು ಉಚಿತ ಪಾರ್ಕಿಂಗ್ ಸೌಲಭ್ಯವಿದೆ.
