ಸ್ಯಾಂಡಲ್ವುಡ್ನ 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ‘ಧ್ರುವತಾರೆ’ ನಿರ್ದೇಶಕ ವಿಧಿವಶರಾಗಿದ್ದಾರೆ. ಯಾರವರು? ಇಲ್ಲಿದೆ ವಿವರ
ಬೆಂಗಳೂರು, [ಅ.29]: ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ಎಂ.ಎಸ್.ರಾಜಶೇಖರ್ ಇಂದು ವಿಧಿವಶರಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರಾಜಶೇಖರ್, ಇಂದು [ಸೋಮವಾರ] ಸಂಜೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.
ಸ್ಯಾಂಡಲ್ವುಡ್ ನ ಸೃಜನಶೀಲ ನಿರ್ದೇಶಕ ಅಂತಲೇ ಕರೆಸಿಕೊಂಡಿದ್ದ ಎಂ.ಎಸ್. ರಾಜಶೇಖರ್ ಅವರು 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ರಾಜ್ಶೇಖರ್ ನಿರ್ದೇಶನದ ಬಹುತೇಕ ಸಿನಿಮಾಗಳು ಸಕ್ಸಸ್ ಕಂಡಿವೆ. ರಥಸಪ್ತಮಿ, ಮನಮೆಚ್ಚಿದ ಹುಡುಗಿ, ನಂಜುಂಡಿ ಕಲ್ಯಾಣ, ಹೃದಯ ಹಾಡಿತು, ಮಣ್ಣಿನ ದೋಣಿ, ಡಕೋಟ ಎಕ್ಸ್ಪ್ರೆಸ್.. ರಾಜ್ಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿವೆ.
