ರೌಡಿಸಂ ಮಾಡಿ ನಲಪಾಡ್ ಮೊಹಮ್ಮದ್ ಇದೀಗ ಜೈಲು ಪಾಲಾಗಿದ್ದು, ಸ್ಯಾಂಡಲ್’ವುಡ್ ನಟಿಯೊಬ್ಬರು ಶಾಸಕ ಎನ್.ಎ.ಹ್ಯಾರಿಸ್ ಪರ ನಟಿ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು: ರೌಡಿಸಂ ಮಾಡಿ ನಲಪಾಡ್ ಮೊಹಮ್ಮದ್ ಇದೀಗ ಜೈಲು ಪಾಲಾಗಿದ್ದು, ಸ್ಯಾಂಡಲ್’ವುಡ್ ನಟಿಯೊಬ್ಬರು ಶಾಸಕ ಎನ್.ಎ.ಹ್ಯಾರಿಸ್ ಪರ ನಟಿ ಬ್ಯಾಟಿಂಗ್ ಮಾಡಿದ್ದಾರೆ.
ನಟಿ ಸಂಜನಾ ಗರ್ಲಾನಿ ಶಾಸಕ ಹ್ಯಾರಿಸ್ ಬಗ್ಗೆ ಅನುಕಂಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಲಪಾಡ್, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇತ್ತ ಕಡೆ ಟ್ವಿಟರ್ನಲ್ಲಿ ನಿಂತ ನಟಿ ಸಂಜನಾ ಶಾಸಕ ಹ್ಯಾರಿಸ್ ಬೆಂಬಲಕ್ಕೆ ನಿಂತಿದ್ದಾರೆ.
‘ಶಾಸಕ ಹ್ಯಾರಿಸ್ ಒಬ್ಬ ಉತ್ತಮ ರಾಜಕಾರಣಿ, ಹ್ಯಾರಿಸ್ರದ್ದು ಯಾವುದೇ ತಪ್ಪಿಲ್ಲದಿದ್ದರೂ, ಮಗ ಮಾಡಿದ ತಪ್ಪಿಗೆ ಹ್ಯಾರಿಸ್ ಬೆಲೆ ತೆರುವಂತಾಗಿದೆ, ಎಂದು ನಟಿ ಟ್ವೀಟಿಸಿದ್ದಾರೆ.
‘2 ದಶಕಗಳಿಂದಲೂ ಉತ್ತಮ ಕೆಲಸ ಮಾಡುತ್ತಿರುವ ಶಾಸಕ ಹ್ಯಾರಿಸ್, ವಿದ್ವತ್ ಮೇಲಿನ ಹಲ್ಲೆ ಬಳಿಕ ಇಂಥದನ್ನೆಲ್ಲಾ ನೋಡಬೇಕಾಗಿದೆ’, ಎಂದು ಸಂಜನಾ ಹೇಳಿದ್ದಾರೆ.
