ಶ್ರತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ನಡುವಿನ ಮೀಟೂ ಸ್ವರೂಪ ಬದಲಾಗಿದ್ದು, ಎಫ್ ಐಆರ್ ದಾಖಲಿಸಿದ್ದಾರೆ. ಹಾಗಿದ್ರೆ, ಶ್ರುತಿ ಹರಿಹರನ್ ಮಾಡಿರುವ ಆರೋಪದಲ್ಲಿ ಉಲ್ಲೇಖಿಸಿರುವ ಅಂಶಗಳೇನು.? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು, (ಅ.27): ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀಟೂ ಆರೋಪಕ್ಕೆ ಶ್ರುತಿ ಹರಿಹರನ್ ಟ್ವಿಸ್ಟ್ ನೀಡಿದ್ದಾರೆ. ಇಷ್ಟು ದಿನ ಸರ್ಜಾ ವಿರುದ್ಧ ಎಲ್ಲಿಯೂ ದೂರು ದಾಖಲಿಸಿರಲಿಲ್ಲ. ಆದ್ರೀಗ, ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಟ ಅರ್ಜುನ್ ಸರ್ಜಾಗೆ ಬಂಧನದ ಭೀತಿ?

'ವಿಸ್ಮಯ' ಚಿತ್ರದ ಚಿತ್ರೀಕರಣ ವೇಳೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಹೇಳುತ್ತಿದ್ದ ಶ್ರುತಿ, ಈಗ ಮತ್ತಷ್ಟು ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಯುಬಿ ಸಿಟಿಯಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ನನಗೆ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ.

ಹೆಬ್ಬಾಳದ ಶೂಟಿಂಗ್ ನಲ್ಲೂ ಕಿರುಕುಳ ಹೆಬ್ಬಾಳದ ಪ್ರೆಸಿಡೆನ್ಸ್ ಕಾಲೇಜಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ನಿರ್ದೇಶಕರ ಸೂಚನೆಯಂತೆ ಒಂದು ದೃಶ್ಯದ ರಿಹರ್ಸಲ್ ಮಾಡಬೇಕಿತ್ತು.

ಒಂದು ಡೈಲಾಗ್ ನಂತರ ತಬ್ಬಿಕೊಳ್ಳುವ ದೃಶ್ಯವಿತ್ತು. ಆದ್ರೆ, ಆ ಸಮಯದಲ್ಲಿ ಅರ್ಜುನ್ ಸರ್ಜಾ ನನ್ನನ್ನು ಅಸಭ್ಯವಾಗಿ ಮುಟ್ಟಿದರು ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಯುಬಿ ಸಿಟಿಯಲ್ಲಿ ದೌರ್ಜನ್ಯ.?: ಯುಬಿ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನನ್ನ ತೊಡೆ ಮತ್ತು ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.