Asianet Suvarna News Asianet Suvarna News

ನಟ ಅರ್ಜುನ್ ಸರ್ಜಾಗೆ ಬಂಧನದ ಭೀತಿ?

ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ್ದು, ಇದೀಗ ನಟ ಶ್ರತಿ ಹರಿಹರನ್ ಗೆ ಬಂಧನದ ಭೀತಿ ಎದುರಾಗಿದೆ.

Sandalwood actor Sruthi Hariharan files FIR against Arjun Sarja
Author
Bengaluru, First Published Oct 27, 2018, 2:46 PM IST
  • Facebook
  • Twitter
  • Whatsapp

ಬೆಂಗಳೂರು, (ಅ.27): ನಟ ಅರ್ಜುನ್ ಸರ್ಜಾಗೆ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಮೀಟೂ ಆರೋಪದಲ್ಲಿ ನಟಿ ಶ್ರತಿ ಹರಿಹರನ್ ಅವರು ಸರ್ಜಾ ಅವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ನನ್ನನ್ನು ರೂಮ್ ಗೆ ಬರುವಂತೆ ಹಾಗೂ ಮುಟ್ಟಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಶ್ರತಿ ಹರಿಹರನ್ ಲೈಗಿಂಕ ದೌರ್ಜನ್ಯ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಶ್ರತಿ ಹರಿಹರನ್ ದೂರು ದಾಖಲಿಸಿದ್ದಾರೆ.

ಶೃತಿ ಹರಿಹರನ್ ದೂರು ಆಧರಿಸಿ ಅರ್ಜುನ್ ಸರ್ಜಾ ವಿರುದ್ಧ ದಾಖಲಾಗಿದ್ದು, ಎಫ್ ಐಆರ್ ಪ್ರತಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಐಪಿಸಿ ಸೆಕ್ಷನ್ 354, 354ಎ, 506, 509 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

* IPC ಸೆಕ್ಷನ್ 354 - ಮಹಿಳೆ ಘನತೆಗೆ ಧಕ್ಕೆ ತರುವ ರೀತಿ ದೌರ್ಜನ್ಯ.

* IPC ಸೆಕ್ಷನ್ 354ಎ - ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ.

* ಐಪಿಸಿ ಸೆಕ್ಷನ್ 506 - ಅಪರಾಧ ಮಾಡುವ ಉದ್ದೇಶದ ಒಳಸಂಚು.

* IPC ಸೆಕ್ಷನ್ 509 - ಮಹಿಳೆ ಘನತೆಗೆ ಧಕ್ಕೆ ತರುವ ರೀತಿ ನಡವಳಿಕೆ.

Follow Us:
Download App:
  • android
  • ios