ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಹೇಳಿಕೆ ನೀಡಿದ್ದು ಇದು ವಿವಾದಕ್ಕೆ ಕಾರಣವಾಗಿದೆ. ಗಾಂಧೀಜಿ ಅವರಿಗೆ ಬಿಜೆಪಿ ಅಪಮಾನ ಮಾಡಿದೆ. ಮೋದಿ ಅವರೇ ಈ ಬಗ್ಗೆ ಕ್ಷಮೆ ಕೇಳಿ ಅಥವಾ, ರಾಹುಲ್ ರೀತಿ ಸಂಬೀತ್‌ರನ್ನು ಉಚ್ಚಾಟಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ನವದೆಹಲಿ: ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಹೇಳಿಕೆ ನೀಡಿದ್ದು ಇದು ವಿವಾದಕ್ಕೆ ಕಾರಣವಾಗಿದೆ.
ಗಾಂಧೀಜಿ ಅವರಿಗೆ ಬಿಜೆಪಿ ಅಪಮಾನ ಮಾಡಿದೆ. ಮೋದಿ ಅವರೇ ಈ ಬಗ್ಗೆ ಕ್ಷಮೆ ಕೇಳಿ ಅಥವಾ, ರಾಹುಲ್ ರೀತಿ ಸಂಬೀತ್ರನ್ನು ಉಚ್ಚಾಟಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ಸಿಗರು ನನ್ನ ತಂದೆ, ತಾಯಿ ಬಗ್ಗೆ ಕೇಳ್ತಿದಾರೆ; ರಾಹುಲ್ ಆಪ್ತ ವಿರುದ್ಧ ಮೋದಿ ಆಕ್ರೋಶ
ಲೂನಾವಾಡ (ಗುಜರಾತ್): ನನ್ನನ್ನು ಪದಚ್ಯುತಿಗೊಳಿಸಲು ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನದಲ್ಲಿ ಸುಪಾರಿ ನೀಡಿದ್ದಾರೆ ಎಂದು ಹೇಳಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು, ‘ಕಾಂಗ್ರೆಸ್ಸಿಗರು ನನ್ನ ತಂದೆ, ತಾಯಿ ಯಾರೆಂದು ಕೇಳುತ್ತಿದ್ದಾರೆ’ ಎಂದು ತರಾಟೆ ತೆಗೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಆಪ್ತ ಎನ್ನಲಾದ ಸಲ್ಮಾನ್ ನಿಜಾಮಿ ಎಂಬಾತ ಮಾಡಿದ್ದ ಟ್ವೀಟ್ ಉಲ್ಲೇಖಿಸಿ, ಹರಿಹಾಯ್ದ ಮೋದಿ ಅವರು, ‘ರಾಹುಲ್ ಗಾಂಧಿ ಪಕ್ಷದವರು ನನ್ನ ತಂದೆ- ತಾಯಿ ಯಾರೆಂದು ಕೇಳುತ್ತಿದ್ದಾರೆ.
ಈ ದೇಶದ ಜನರೇ ನನ್ನ ಪೋಷಕರು. ಲೂನಾವಾಡದ ಮಣ್ಣಿನ ಮಗ ನಾನು. ಆದರೆ ಶತ್ರುಗಳಿಗಾದರೂ ಇಂತಹ ‘ಭಾಷೆಯನ್ನು ಬಳಸಬಹುದೆ? ಕಾಂಗ್ರೆಸ್ಸಿನ ನಾಯಕನೊಬ್ಬ ಆ ಪ್ರಶ್ನೆಯನ್ನು ನನಗೆ ಕೇಳಿದ್ದಾನೆ’ ಎಂದು ಕುಟುಕಿದರು. ಈ ನಡುವೆ ಕಾಂಗ್ರೆಸ್ ಪಕ್ಷವು ನಿಜಾಮಿಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೊಂಡಿದೆ.
ಆದರೆ ಪಕ್ಷದಲ್ಲಿ ನಿಜಾಮಿ ಹುದ್ದೆ ಹೊಂದಿರುವ ಬಗ್ಗೆ ಬಿಜೆಪಿಯವರು ಎಐಸಿಸಿ ಆದೇಶ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ.
ಮೀಸಲಿನ ಬಗ್ಗೆ ಚಾಟಿ: ಇದೇ ವೇಳೆ, ತಮ್ಮ ಪ್ರಚಾರ ‘ಭಾಷಣದಲ್ಲಿ ಇದೇ ಮೊದಲ ಬಾರಿಗೆ ಪಟೇಲ್ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ ಮೋದಿ ಅವರು, ಕಾಂಗ್ರೆಸ್ ಪಕ್ಷ ಪಟೇಲರಿಗೆ ಮೀಸಲಾತಿ ನೀಡುವ ಭರವಸೆ ನೀಡಿದೆ. ಆದರೆ ಹೇಗೆ ಈಡೇರಿಸುತ್ತದೆ? ಪಟೇಲರಿಗೆ ಮೀಸಲು ಕೊಡಬೇಕಾದರೆ ಎಸ್ಸಿ, ಎಸ್ಟಿ ಹಾಗೂ ಒಬಿಸಿಗೆ ನೀಡಲಾಗಿರುವ ಮೀಸಲಾತಿಯ ಪಾಲನ್ನು ಕಿತ್ತುಕೊಳ್ಳಬೇಕು ಅಥವಾ ಸುಳ್ಳು ಭರವಸೆ ನೀಡಬೇಕು. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಮುಸ್ಲಿಮರಿಗೆ ಮೀಸಲು ನೀಡುವ ಲಾಲಿಪಾಪ್ ಅನ್ನು ಈಗಾಗಲೇ ಕಾಂಗ್ರೆಸ್ ನೀಡಿದೆ ಎಂದು ತರಾಟೆಗೆ ತೆಗೆದುಕೊಂಡರು.
