ಗಾಂಧಿ ಜಯಂತಿ ಆಚರಣೆಯಂದು ರಾಜಕೀಯ ನಾಯಕನ ಹೈಡ್ರಾಮಾ| ಗಾಂಧಿ ಪ್ರತಿಮೆ ಬಳಿ ಕಣ್ಣೀರಿಟ್ಟ ಫಿರೋಜ್ ಖಾನ್| ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?| ಫೇಮಸ್ ಆಗಲು ನಾಟಕ, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಗೆಪಾಟಲಿಗೀಡಾದ

ಲಕ್ನೋ[ಅ.03]: ಅಕ್ಟೋಬರ್ 2ರಂದು ದೇಶಾದ್ಯಂತ ಮಹಾತ್ಮ ಗಾಂಧಿ ಜನ್ಮ ಜಯಂತಿಯನ್ನು ಸ್ವಚ್ಛತೆ, ಪ್ಲಾಸ್ಟಿಕ್ ವಿರೋಧಿ ಅಭಿಯಾನ, ಪಾದಯಾತ್ರೆ ಹೀಗೆ ವಿಭಿನ್ನವಾಗಿ ಆಚರಿಸಲಾಯ್ತು. ಆದರೆ ಈಆಚರಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ಹಾಗೂ ಆತನ ಬೆಂಬಲಿಗರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಾಯಕನ ವಿಡಿಯೋ ಒಂದು ಭಾರೀ ವೈರಲ್ ಆಗಿದ್ದು, ನಗೆಪಾಟಲಿಗೀಡಾಗಿದ್ದಾರೆ.

ಹೌದು ಉತ್ತರಪ್ರದೇಶದ ಗಾಂಧಿ ಪ್ರತಿಮೆಯೊಂದರ ಬಳಿ ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ಫಿರೋಜ್ ಖಾನ್ ಹಗೂ ಆತನ ಬೆಂಬಲಿಗರು ಕಣ್ಣೀರಿಟ್ಟಿದ್ದಾರೆ. ಅಷ್ಟೇ ಅಲ್ಲದೇ 'ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನೀವು ಯಾಕಷ್ಟು ಬೇಗ ನಮ್ಮನ್ನು ಅಗಲಿದಿರಿ' ಎಂದೂ ದೂರಿದ್ದಾರೆ.

Scroll to load tweet…

ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ವ್ಯಕ್ತಿಯೊಬ್ಬರು 'ಜನಪ್ರಿಯರಾಗಲು ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ವಿಚಿತ್ರ ನಾಟಕವಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಫೇಮಸ್ ಆಗಲು ಹೊರಟ ನಾಯಕ, ಸದ್ಯ ಮುಜುಗರಕ್ಕೀಡಾಗಿದ್ದಾರೆ.